ETV Bharat / state

ಬರೆದಂತೆ ಬದುಕುವುದು ನಮ್ಮ ಹೊಣೆಗಾರಿಕೆ: ದಸರಾ ಕವಿಗೋಷ್ಟಿಯಲ್ಲಿ ಕವಿ ಎಸ್.ಜಿ.ಸಿದ್ದರಾಮಯ್ಯ - ಜಾದೂಗರ್ ದಿನೇಶ್

ಜಾಗತಿಕ ವಾತಾವರಣದೊಳಗೆ ನಾವ್ಯೂರೂ ಕೂಡ ಸಂತೋಷಪಡುವ ಸ್ಥಿತಿಯಲ್ಲಿಲ್ಲ ಎಂದು ಕವಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನೃತ್ಯದ ಮೂಲಕ ಕನ್ನಡದ ಶಕ್ತಿ ಹಾಗೂ ವೈಭವವನ್ನು ಸಾರಿದರು

author img

By ETV Bharat Karnataka Team

Published : Oct 19, 2023, 9:27 PM IST

ನೃತ್ಯದ ಮೂಲಕ ಕನ್ನಡದ ಶಕ್ತಿ ಹಾಗೂ ವೈಭವವನ್ನು ಸಾರಿದರು

ಮೈಸೂರು: ಬರೆದಂತೆ ಬದುಕುವುದು ನಮ್ಮ ಹೊಣೆಗಾರಿಕೆ. ಸಾಹಿತ್ಯ ಬರೆಯುವ ಪ್ರತಿಯೊಬ್ಬರಿಗೂ ಕೂಡ ಸಾಮಾಜಿಕ ಜವಾಬ್ದಾರಿಯಿದೆ ಎಂದು ಕವಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ. ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುತ್ತಿರುವ ಕವಿಗೋಷ್ಠಿಯ ಮೂರನೇ ದಿನವಾದ ಗುರುವಾರ ಪ್ರಾದೇಶಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ನಮ್ಮ ದೇಶವನ್ನೂ ಒಳಗೊಂಡಂತೆ ಇಡೀ ಜಗತ್ತಿನ ವ್ಯಾಪ್ತಿಯೊಳಗೆ ನೋಡಿದರೆ ಮಕ್ಕಳು, ಮಹಿಳೆಯರ ಮೇಲಾಗುತ್ತಿರುವಂತಹ ಹಲ್ಲೆಯಿಂದ ಹಿಡಿದು ಯುದ್ಧ ಉಂಟು ಮಾಡುತ್ತಿರುವ ಭೀತಿ ಮತ್ತು ಅಮಾನವೀಯತೆಯ ವಿಜೃಂಭಣೆಯನ್ನು ನೋಡಿದಾಗ ಮಾತು ಕಟ್ಟುತ್ತದೆ. ಜಗತ್ತಿನ ಯಾವ ಮೂಲೆಯೂ ಕೂಡ ಸುರಕ್ಷಿತವಾಗಿ ಉಳಿಯಲಾರದ ಪರಿಸ್ಥಿತಿ ಉಂಟಾಗಿದೆ. ಜನಾಂಗೀಯ ದ್ವೇಷ ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾವ್ಯ, ಸಾಹಿತ್ಯ, ಕಲೆಗೆ ಒಂದು ಹೊಣೆಗಾರಿಕೆ ಇದೆ. ಅದು ಸಾಮಾಜಿಕ ಹೊಣೆಗಾರಿಕೆ. ಯಾವುದೇ ಭಾಷೆಯ ಸಾಹಿತ್ಯ, ಕಲೆ ಅನ್ನುವುದು ಕೇವಲ ಭಾಷೆಗೆ ಮಾತ್ರ ಸೀಮಿತವಾದಂತೆ ಮಾತನಾಡುವುದಿಲ್ಲ. ಅದು ವಿಶ್ವ ವ್ಯಾಪ್ತಿಯೊಳಗೆ ಲೋಕದರ್ಶನ ಕಟ್ಟಿಕೊಡುತ್ತದೆ. ಈಗಿನ ವಾತಾವರಣದೊಳಗಿನ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಂತಹ ಮನಸ್ಸುಗಳ ಮಾತುಗಳನ್ನು ಪತ್ರಿಕೆಗಳಲ್ಲಿ ನಾವು ಕಾಣಬಹುದೆಂದರು.

ಜಗದ್ಗುರುಗಳೆಂದು ಅನಿಸಿಕೊಂಡವರು ಕೂಡ ಅವರವರ ಜಾತಿಗೆ ಜಗದ್ಗುರುಗಳೇ ಹೊರತು, ನಿಜವಾದ ಜಗತ್ತಿಗೆ ಗುರುಗಳಲ್ಲ. ನಮಗೆ ನಮ್ಮ ಬರಹಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಬದುಕಿದರೆ ಮಾತ್ರ ನಮಗೆ ಮಾತನಾಡುವ ನೈತಿಕ ಶಕ್ತಿ ಮತ್ತು ಧೈರ್ಯ ಇರುತ್ತದೆ ಎಂದು ಹೇಳಿದರು.

ಮಕ್ಕಳ ದಸರಾ: ಮಕ್ಕಳ ದಸರಾದಲ್ಲಿ ವಿದ್ಯಾರ್ಥಿಗಳು ನಾಡಿನ ಹಿರಿಮೆ-ಗರಿಮೆಯನ್ನು ಸಾರಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಗುರುವಾರ ನಡೆದ ಮಕ್ಕಳ ದಸರಾದಲ್ಲಿ ಜಿಲ್ಲಾ 9 ತಾಲೂಕುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ನೃತ್ಯದ ಮೂಲಕ ಕನ್ನಡದ ಶಕ್ತಿ ಹಾಗೂ ವೈಭವ ಸಾರಿದರು.

ಕನ್ನಡನಾಡು-ನುಡಿಯ ಸೌಂದರ್ಯ, ರಾಜ್ಯಕ್ಕಾಗಿ ಹೋರಾಟ ಮಾಡಿದವರ ಕಿಚ್ಚು, ಮೈಸೂರು ಭಾಗಕ್ಕೆ ಮೈಸೂರು ಅರಸರು ನೀಡಿದ ಕೊಡುಗೆ ಹೀಗೆ ಕನ್ನಡ ನಾಡಿನ ಕಿಚ್ಚನ್ನು ಹಾಡಿನ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಗೋಪಾಲಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಕೀರ್ತನಾ ಮತ್ತು ತಂಡದ ಸದಸ್ಯರು, ಹಚ್ಚೇವು ಕನ್ನಡದ ದೀಪ ಎಂದು ನಾಡಿನ ಹೋರಾಟದ ಕಿಚ್ಚನ್ನು ಪ್ರದರ್ಶಿಸಿ, ಮೈಸೂರು ಮಹಾರಾಜರು ನೀಡಿದ ಕೊಡುಗೆಗಳನ್ನು ನೃತ್ಯದ ಮೂಲಕ ಸ್ಮರಿಸಿದರು.

ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಲೈ ಮಹದೇಶ್ವರ ಭಕ್ತಿ ಗೀತೆ ನೃತ್ಯ ಮಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆಯನ್ನು ನೃತ್ಯದ ಮೂಲಕ ಸ್ಮರಿಸಿದರು. ಅಲ್ಲದೇ, ಕಾವೇರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ತಂಡದವರು ಪ್ರಸ್ತುತಪಡಿಸಿದ ನವಶಕ್ತಿ ವೈಭವ ನೃತ್ಯದಲ್ಲಿ ನವದುರ್ಗೆಯವರ ಮಹತ್ವವನ್ನು ಸಾರಿ, ದುಷ್ಟಶಕ್ತಿಗೆ ಎಂದಿಗೂ ಒಳಿತಿಲ್ಲವೆಂದು ತೋರಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪೀಪಲ್ಸ್ ಪಾರ್ಕ್ ಶಾಲಾ ಮಕ್ಕಳು ಸಮೂಹ ಗೀತೆಗೆ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು. ದಸರಾ ಮಹೋತ್ಸವ ಜಂಬೂಸವಾರಿ ಯಶಸ್ವಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗರ ಮಕ್ಕಳ, ಕಾಡಿನ ನೃತ್ಯ ಮಾಡಿ ಸಭಿಕರ ಮುಂದೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಜಾದೂಗರ್ ದಿನೇಶ್ ಜಾದೂ ಹಾಗೂ ಪವಾಡ ಮಾಡಿ, ಮಕ್ಕಳನ್ನು ರಂಜಿಸಿದರು.

ಮಂಥನ್ ಮತ್ತು ತಂಡ, ಬಾಲಸುಬ್ರಹ್ಮಣ್ಯ ಮತ್ತು ತಂಡ, ಲಕ್ಷ್ಮಿ ಮತ್ತು ತಂಡ ಹೀಗೆ 9 ತಾಲೂಕುಗಳಿಂದ ವಿವಿಧ ಶಾಲೆಗಳ ಮಕ್ಕಳ ತಂಡ, ಪರಿಸರ ಕಾಳಜಿ, ನಾಡು-ನುಡಿ, ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಮಾಡಿ ರಂಜಿಸಿದರು.

ಇದನ್ನೂ ಓದಿ: ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದ 'ಚಂದ್ರಯಾನ-3' ಕಲಾಕೃತಿ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.