ಮೈಸೂರು: ಬಟ್ಟೆ ಇಸ್ತ್ರಿ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸಿಕ್ಕ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಗ್ರಾಹಕರಿಗೆ ವಾಪಸ್ ನೀಡಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದ ಸೋಮಣ್ಣ, ಹ್ಯಾಂಡ್ ಪೋಸ್ಟ್ನಲ್ಲಿ ಐರನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಲಾರ ಕಾಲೊನಿ ನಿವಾಸಿ ಮಹೇಶ್ ತಮ್ಮ ಪ್ಯಾಂಟ್ ಅನ್ನು ಐರನ್ ಮಾಡಿಸಲು ಸೋಮಣ್ಣನಿಗೆ ಕೊಟ್ಟು ಹೋಗಿದ್ದರು. ಈ ಸಂದರ್ಭದಲ್ಲಿ ಐರನ್ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಸಿಕ್ಕಿದೆ. ಕೂಡಲೇ ಈತ ಮಹೇಶ್ಗೆ ಕಾಲ್ ಮಾಡಿ ಮಾಂಗಲ್ಯ ಸರವನ್ನು ವಾಪಸ್ ನೀಡಿದ್ದಾರೆ. ಸೋಮಣ್ಣರ ಪ್ರಾಮಾಣಿಕತೆಗೆ ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.
ಚಿನ್ನದ ಸರ ವಾಪಸ್ ನೀಡಿ ಮಾನವೀಯತೆ ಮೆರೆದ ಐರನ್ ಅಂಗಡಿ ವ್ಯಕ್ತಿ..! - ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದ ಸೋಮಣ್ಣ