ETV Bharat / state

ಅಂತರ್ ​​​​​ರಾಜ್ಯ ದರೋಡೆಕೋರರ ಬಂಧನ: 1.50 ಲಕ್ಷ ರೂ. ನಗದು ವಶ - ಅಂತರ್ ​​​​​ರಾಜ್ಯ,ದರೋಡೆಕೋರರ,

ಆಂಧ್ರ ಪ್ರದೇಶ ಮೂಲದ ಇಬ್ಬರು ದರೋಡೆಕೋರರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದರೋಡೆಕೋರರು
author img

By

Published : Feb 11, 2019, 8:30 PM IST

ಮೈಸೂರು: ಅಂತರ್​​​​ ರಾಜ್ಯ ಇಬ್ಬರು ದರೋಡೆಕೋರರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶ ಮೂಲದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ನಿವಾಸಿಗಳಾದ ರಾಜೇಶ್(28), ಷಣ್ಮುಗಂ(52) ಬಂಧಿತ ದರೋಡೆಕೋರರು. ವಿಜಯನಗರದ ನಿವಾಸಿ ರಾಜು ಎಂಬುವವರು 2018ರ ನವೆಂಬರ್ 14ರಂದು ಶಿವರಾಂಪೇಟೆ ವಿನೋಬ ರಸ್ತೆಯಲ್ಲಿರುವ ಕರೂರು ವೈಶ್ಯಾ ಬ್ಯಾಂಕಿನಿಂದ 2 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಬಳಿ ಹೋಗಲು ರಸ್ತೆ ದಾಟುತ್ತಿದ್ದರು. ಆಗ ಬೈಕ್‍ನಲ್ಲಿ ಬಂದ ಇವರು ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರು. ಈ ಸಂಬಂಧ ರಾಜು ಅವರು ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕುಪ್ಪಂನಲ್ಲಿ ಇವರಿಬ್ಬರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ 1.50 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೊಂದಿಗೆ ಮತ್ತಿಬ್ಬರು ಸೇರಿಕೊಂಡು ಈ ಕ್ಯತ್ಯವೆಸಗಿದ್ದಾರೆ. ಇನ್ನಿಬ್ಬರು ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Intro:Body:

Murali_mys

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.