ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ವಿಮಾನಯಾನಕ್ಕೆ, ಕೋವಿಡ್ ನಂತರ ಹೆಚ್ಚಿನ ಬೇಡಿಕೆ ಬರುತ್ತಿದೆ. ಲಾಕ್ಡೌನ್ ನಂತರ ವಿಮಾನಯಾನ ಮತ್ತೆ ಆರಂಭವಾಗಿದ್ದು, ಮೊದಲು 8 ನಗರಗಳಿಗೆ ಸೇವೆ ಆರಂಭವಾಗಿತ್ತು. ಈಗ ಕೋವಿಡ್ ನಂತರ ಗೋವಾ, ಬೆಂಗಳೂರು, ಬೆಳಗಾವಿ, ಹೈದರಾಬಾದ್, ಕೊಚ್ಚಿ ನಗರಗಳಿಗೆ ಸೇವೆಯನ್ನು ಆರಂಭಿಸಲಾಗಿದೆ.
ಶೀಘ್ರವೇ ಹೈದರಾಬಾದ್ ಹಾಗೂ ಕೊಚ್ಚಿಗೂ ವಿಮಾನಯಾನವನ್ನು ಆರಂಭಿಸಲು ಚಿಂತನೆ ನಡೆಸಿದ್ದು, ವಿಮಾನಯಾನದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವಿಮಾನಯಾನವನ್ನು ಆರಂಭಿಸಲಾಗಿದೆ. ಕೋವಿಡ್ ನಂತರ ವಿಮಾನಯಾನಕ್ಕೆ ಮೈಸೂರಿನಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಡೈರಕ್ಟರ್ ಮಂಜುನಾಥ್ ತಿಳಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು ?
2014 ರಲ್ಲಿ ನಾನ್ ಫಂಕ್ಷನಿಂಗ್ ವಿಮಾನ ನಿಲ್ದಾಣವಾಗಿದ್ದ ಮೈಸೂರು ವಿಮಾನ ನಿಲ್ದಾಣದಿಂದ, ಇಂದು 8 ಕ್ಕೂ ಹೆಚ್ಚು ವಿಮಾನಗಳು ಹೊಡಾಟ ನಡೆಸುತ್ತಿವೆ. ಕೊರೊನಾದಿಂದ ಕೆಲವು ಸೇವೆಗಳನ್ನು ನಿಲ್ಲಿಸಿದ್ದು, ಈಗ ಅವುಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಜೊತೆಗೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರವು ಭೂ ಸ್ವಾಧೀನ ಮಾಡಿಕೊಡಬೇಕಾಗುತ್ತದೆ. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 120 ಕೋಟಿ ಅನುದಾನ ಹಾಗೂ 160 ಎಕರೆ ಭೂಮಿ ಸ್ವಾಧೀನ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಈಗ ಅಲೆಯನ್ ಏರ್ ಇಂಡಿಯಾ, ಟ್ರೂ ಜೆಟ್ ವಿಮಾನಗಳು ಹಾರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಮಾನಗಳು ಹಾರಾಟ ನಡೆಸಲಿವೆ ಎಂದು ತಿಳಿಸಿದರು.