ಮೈಸೂರು: ಅರಮನೆಯ ಆಡಳಿತ ಮಂಡಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಕೋರಿಕೆಗೆ ಸರ್ಕಾರ ಸ್ಪಂಧಿಸಿದ್ದು, ಓಕೆ ಎಂದು ಹೇಳಿದೆ.
ವಿಶ್ವವಿಖ್ಯಾತ ಮೈಸೂರು ಅರಮನೆಯ ಆಡಳಿತ ಮಂಡಳಿ ತೆರಿಗೆ ಪಾವತಿಸಬೇಕೆಂದು ಆದಾಯ ತೆರಿಗೆ ಇಲಾಖೆ ಕಳೆದ ಜುಲೈನಲ್ಲಿ ನೋಟಿಸ್ ನೀಡಿತ್ತು. ಆದರೆ, ಈ ನೋಟಿಸ್ಗೆ ಉತ್ತರ ನೀಡಿದ ಅರಮನೆಯ ಆಡಳಿತ ಮಂಡಳಿಯ ಅಧ್ಯಕ್ಷರು ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅರಮನೆ ಆಡಳಿತ ಮಂಡಳಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ, ಜೊತೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಸಮಯದಲ್ಲಿ ಇರುವ ದೀಪಾಲಂಕಾರ ವೀಕ್ಷಣೆ ಮಾಡಲು ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ.
ಆದ್ದರಿಂದ ಆದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಪ್ರಕಾರ, 10(46)ರ ಅನ್ವಯ ತೆರಿಗೆ ವಿನಾಯಿತಿ ನೀಡುವಂತೆ ಕೇಳಿದ್ದರು. ಇದರನ್ವಯ 2023-24 ವರಗೆ ತೆರಿಗೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರದ ಆದಾಯ ಇಲಾಖೆಯು ಅರಮನೆ ಆಡಳಿತ ಮಂಡಳಿಗೆ ಪತ್ರ ಬರೆದು ತಿಳಿಸಿದೆ.