ETV Bharat / state

ಅಕ್ರಮವಾಗಿ ರೆಸಾರ್ಟ್​ ನಿರ್ಮಾಣ ಆರೋಪ : ಪೊಲೀಸ್​ ಠಾಣೆಗೆ ದೂರು - ನಾಗರಹೊಳೆ ರಾಷ್ಟ್ರೀಯ ಉದ್ಯಾನ

ಈ ಸ್ಥಳದಲ್ಲಿ ಒಂದು ಈಜುಕೊಳ ಮತ್ತು 5 ಬೆಡ್ ರೂಮ್ ಇರಬಹುದಾದ ಕಟ್ಟಡ ನಿರ್ಮಾಣ ಒಂದೆಡೆಯಾದರೆ, ಇನ್ನೊಂದೆಡೆ 3 ಕೊಠಡಿಗಳಿರುವ ಕಟ್ಟಡ ನಿರ್ಮಾಣವಾಗುತ್ತಿರುವುದಾಗಿ ಗೋಚರಿಸುತ್ತಿದೆ..

Illegal Resort
ಅಕ್ರಮವಾಗಿ ರೆಸಾರ್ಟ್​ ನಿರ್ಮಾಣವಾಗುತ್ತಿರುವ ಸ್ಥಳ
author img

By

Published : Nov 18, 2020, 6:50 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಬಿನಿ ಹಿನ್ನೀರಿನ ಬಳಿಯಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್ ಮಾದರಿಯ ಬೃಹತ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಕ್ರಮವಾಗಿ ಕೈಗೆತ್ತಿಗೊಳ್ಳಲಾಗಿದ್ದು, ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಬಂಧ ವಿಶೇಷ ಹುಲಿ ಸಂರಕ್ಷಣಾ ಪಡೆಯು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಡೆ ಹಿಡಿದಿದೆ. ತಾಲೂಕಿನ ಎನ್.ಬೆಳತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರಾಪುರ ಗ್ರಾಮದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಪ್ರಭಾವಿ ವ್ಯಕ್ತಿಯೊಬ್ಬ ಬೇನಾಮಿ ಹೆಸರಿನಲ್ಲಿ ಈ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅಕ್ರಮವಾಗಿ ರೆಸಾರ್ಟ್​ ನಿರ್ಮಾಣವಾಗುತ್ತಿರುವ ಸ್ಥಳ

ಈ ಹಿಂದೆಯೇ ಅಕ್ರಮ ಕಟ್ಟಡ ಸಂಬಂಧ ಅರಣ್ಯ ಇಲಾಖೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯತ್ ವತಿಯಿಂದ ನೋಟಿಸ್ ನೀಡಲಾಗಿತ್ತು, ಅಲ್ಲದೆ ಈ ಪ್ರದೇಶದಲ್ಲಿ ಅಕ್ರಮವಾಗಿ ಕಾಲುವೆ ತೋಡಿರುವ ಸಂಬಂಧ ನರಸಿಂಹಮೂರ್ತಿ ಎಂಬುವರ ವಿರುದ್ಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ವಲ್ಪ ತಿಂಗಳ ಹಿಂದೆ ಈ ಕಾಮಗಾರಿ ಸ್ಥಗಿತಗೊಂಡಿತ್ತು.

ಆದರೆ, ಈಗ ಮತ್ತೆ ಕಾಮಗಾರಿ ಶುರುವಾಗಿದ್ದು, ಎನ್.ಬೆಳತ್ತೂರು ಸರ್ವೇ ಸಂಖ್ಯೆ 142 ಮತ್ತು 144ರಲ್ಲಿನ ಈ ಜಾಗವನ್ನು ವಾಸಸಿಸಲು ಮನೆ ನಿರ್ಮಾಣಕ್ಕೆ ಎಂದು ಅನುಮತಿ ಪಡೆದು ರೆಸಾರ್ಟ್ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಈ ಸ್ಥಳದಲ್ಲಿ ಒಂದು ಈಜುಕೊಳ ಮತ್ತು 5 ಬೆಡ್ ರೂಮ್ ಇರಬಹುದಾದ ಕಟ್ಟಡ ನಿರ್ಮಾಣ ಒಂದೆಡೆಯಾದರೆ, ಇನ್ನೊಂದೆಡೆ 3 ಕೊಠಡಿಗಳಿರುವ ಕಟ್ಟಡ ನಿರ್ಮಾಣವಾಗುತ್ತಿರುವುದಾಗಿ ಗೋಚರಿಸುತ್ತಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಅರಣ್ಯ ಇಲಾಖೆಯವರು ನೋಟೀಸ್ ನೀಡಿದ್ದಾರೆ. ಹೀಗಿದ್ದರೂ ಸಹ ಕಾಮಗಾರಿ ಮಾತ್ರ ಸ್ಥಗಿತಗೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.