ETV Bharat / state

'ನಾನು ಎರಡು ಲಕ್ಷ ಲೀಡ್​ನಿಂದ ಮತ್ತೆ ಗೆಲ್ಲುತ್ತೇನೆ': ಸಂಸದ ಪ್ರತಾಪ್ ಸಿಂಹ ವಿಶ್ವಾಸ

MP Pratap Simha: ''ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪಕ್ಷದ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ'' ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

MP Pratap Simha
ಸಂಸದ ಪ್ರತಾಪ್ ಸಿಂಹ
author img

By ETV Bharat Karnataka Team

Published : Sep 9, 2023, 2:41 PM IST

'ನಾನು ಎರಡು ಲಕ್ಷ ಲೀಡ್​ನಿಂದ ಮತ್ತೆ ಗೆಲ್ಲುತ್ತೇನೆ': ಸಂಸದ ಪ್ರತಾಪ್ ಸಿಂಹ ವಿಶ್ವಾಸ

ಮೈಸೂರು: ''ಜೆಡಿಎಸ್- ಬಿಜೆಪಿ ಮೈತ್ರಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಆದರೆ, ಎರಡು ಬಾರಿ ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ'' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಂದು ಮೈಸೂರು - ನಂಜನಗೂಡು ರಸ್ತೆಯ ಅಗಲೀಕರಣದ ಸಂಬಂಧ, ಜೆಎಸ್ಎಸ್ ಕಾಲೇಜಿನ ಬಳಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪಕ್ಷದ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ. ಮೈತ್ರಿಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಎರಡು ಬಾರಿ ಸಂಸದನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನ ನನಗೆ ಮತ ಕೊಡುತ್ತಾರೆ. ನಾನು ಮುಂದಿನ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಲೀಡ್​ನಿಂದ ಗೆದ್ದೇ ಗೆಲ್ಲುತ್ತೇನೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ'' ಎಂದು ಅವರು, ಮುಂದಿನ ಚುನಾವಣೆಯಲ್ಲಿ ನನಗೇ ಟಿಕೆಟ್, ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಯಡಿಯೂರಪ್ಪ ನಮ್ಮ ನಾಯಕರು: ''ಏಕಾಂಗಿಯಾಗಿ ರಾಜ್ಯದ ಪ್ರವಾಸ ಮಾಡಿ, ಪಕ್ಷ ಕಟ್ಟಿದವರು ಯಡಿಯೂರಪ್ಪ ಅವರು. ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಏನೇ ತೀರ್ಮಾನ ಮಾಡಿದರೂ ಪಕ್ಷದ ಒಳಿತಿಗಾಗಿ ಮಾಡಿರುತ್ತಾರೆ. ರಾಜ್ಯದ ಜನ ಕಳೆದ 40 ವರ್ಷಗಳಿಂದ ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಸರ್ಕಾರವನ್ನು ಬದಲಿಸುತ್ತಾ ಬಂದಿದ್ದಾರೆ. 2004ರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಬೆಂಬಲ ಸಿಕ್ಕೆ ಸಿಗುತ್ತದೆ'' ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಮಹಿಷಾ ದಸರಾ ಆಚರಣೆ ಮಾಡುವವರಿಗೆ ಅವರ ಮನೆಯಲ್ಲೇ ಬೆಂಬಲವಿಲ್ಲ: ''ಯಾವ ಸರ್ಕಾರ ಬಂದರೂ ಮಹಿಷಾ ದಸರಾ ಆಚರಣೆ ಮಾಡುವ ಹಾಗಿಲ್ಲ. ಅದು ಹೇಗೆ ಮಾಡುತ್ತಾರೋ ನಾನು ನೋಡುತ್ತೇನೆ. ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾಗುತ್ತದೆ. ಏನೇ ಕಷ್ಟ ಬಂದರೂ ಲಕ್ಷಾಂತರ ಮಂದಿ ಚಾಮುಂಡಿ ತಾಯಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಹೀಗಿರುವಾಗ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡಬಾರದು. ಕೊಟ್ಟರೆ ಒಟ್ಟಾಗಿ ನಾವೆಲ್ಲ ವಿರೋಧಿಸುತ್ತೇವೆ. ಚಾಮುಂಡಿ ತಾಯಿ ನೆಲೆಸಿರುವ ಜಾಗದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡಬಾರದು'' ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.

''ಮಹಿಷಾ ದಸರಾ ಆಚರಣೆ ಮಾಡಲು ಹೊರಟಿರುವ ನಾಲ್ಕು ಮಂದಿ ಮನೆಗೆ ಹೋಗಿ ನೋಡಿ. ಅವರ ಹೆಂಡತಿಯರು ಚಾಮುಂಡಿ ತಾಯಿಯನ್ನು ಆರಾಧನೆ ಮಾಡುತ್ತಾರೆ. ಮಹಿಷಾ ದಸರಾ ಆಚರಣೆ ಮಾಡುವವರಿಗೆ ಅವರ ಭಾವನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತವರು ಉದ್ದುದ್ದ ಮಾತನಾಡುತ್ತಾರೆ'' ಎಂದು ಅವರು, ''ಮಹಿಷಾ ದಸರಾ ಮಾಡುವವರಿಗೆ ಅವಕಾಶ ನೀಡುವುದಿಲ್ಲ'' ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ: ಜೆಡಿಎಸ್​ನವರು ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿಗೆ ಮುಂದಾಗಿರುವುದು ದುರ್ದೈವದ ಸಂಗತಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.