ಮೈಸೂರು: ನಾನು ಆರೋಗ್ಯವಾಗಿದ್ದೇನೆ, ವೈದ್ಯರ ಸಲಹೆ ಮೇರೆಗೆ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯದ ಬಗ್ಗೆ ಸ್ವತಃ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗ್ಗಿನ ಜಾವ ನನಗೆ ಸ್ವಲ್ಪ ಸುಸ್ತು ಹಾಗೂ ಎದೆ ನೋವು ಕಾಣಿಸಿಕೊಂಡಿತು ತಕ್ಷಣವೇ ನಾನು ಸಮೀಪವಿದ್ದ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಪಟ್ಟೆ, ಎಲ್ಲಾ ಟೆಸ್ಟ್ಗಳ ಜೊತೆಯಲ್ಲಿ ಕೋವಿಡ್ ಟೆಸ್ಟ್ ಕೂಡಾ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿರುತ್ತದೆ. ನಾನು ತಾಯಿ ಚಾಮುಂಡೇಶ್ವರಿ ದಯೆಯಿಂದ ಆರೋಗ್ಯವಾಗಿದ್ದೇನೆ, ವೈದ್ಯರ ಸಲಹೆ ಮೇರೆಗೆ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ ಎಂದು ಸ್ವತಃ ರಾಮದಾಸ್ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.