ETV Bharat / state

ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವೆ: ಮಾಜಿ ಸಚಿವ ವಿ ಸೋಮಣ್ಣ - V Somanna React

Former minister V Somanna; ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂಬುದು ಗೊತ್ತು. ಪದೇ ಪದೆ ಮಾತನಾಡಬಾರದು ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು.

Former minister V Somanna
Former minister V Somanna
author img

By ETV Bharat Karnataka Team

Published : Dec 16, 2023, 6:35 PM IST

ಮೈಸೂರು: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳಿ, ನಮ್ಮ ಹೈಕಮಾಂಡ್ ಭೇಟಿ ಮಾಡುವೆ. ಅಲ್ಲಿ ಮಾತುಕತೆ ನಡೆಸಿದ ಬಳಿಕ ನನ್ನ ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಶನಿವಾರ ಮೈಸೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಮೊದಲು ಹೇಳಿದಂತೆ ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವೆ. ಕಾರ್ತಿಕ ಮಾಸ ಮುಗಿದು ಇಂದಿನಿಂದ ಧನುರ್ಮಾಸ ಆರಂಭವಾಗುತ್ತಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುವೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಆ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವೆ. ಭೇಟಿ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಸಹ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಮಾಜಿ ಸಚಿವ ವಿ ಸೋಮಣ್ಣ
ಮಾಜಿ ಸಚಿವ ವಿ ಸೋಮಣ್ಣ

ನಿಮ್ಮ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣರಾದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಸೋಮಣ್ಣ, ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂಬುದನ್ನು ಪದೇ ಪದೆ ಮಾತನಾಡಬಾರದು. ಸೋಲಿಗೆ ಯಾರು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಪದೇ ಪದೆ ಆ ವಿಚಾರವನ್ನು ಪ್ರಸ್ತಾಪ ಮಾಡುವುದು ಬೇಡ ಎಂದರು.

ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ: ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತದೋ ಅದನ್ನು ನಿಭಾಯಿಸುವೆ ಎಂದಷ್ಟೇ ಹೇಳಿದರು. ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್ ಟಿ ಸೋಮಶೇಖರ್, ಶಿವರಾಂ ​ ಹೆಬ್ಬಾರ್ ಅವರಿಗೆ ಪಕ್ಷದ ಮುಖಂಡರು ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ. ಅದಕ್ಕಾಗಿ ಅವರು ಹೋಗಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಬರುವುದಕ್ಕೂ ಮುನ್ನ ಇಬ್ಬರು ಮೊದಲು ಕಾಂಗ್ರೆಸ್​ನಲ್ಲಿ ಇದ್ದವರು. ಔತಣಕೂಟಕ್ಕೆ ಹೋದ ತಕ್ಷಣ ಮತ್ತೆ ಕಾಂಗ್ರೆಸ್​ಗೆ ಹೋಗುತ್ತಾರೆ ಎಂಬುದರಲ್ಲಿ ಅರ್ಥವಲ್ಲ ಎಂದರು.

ನೀವು ಬಿಜೆಪಿ ಬಿಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಡಿಕೆಶಿ ಭೋಜನ ಕೂಟಕ್ಕೆ ಹೋಗಿದ್ದ ಸೋಮಶೇಖರ್​ರಿಂದ ಮಾಹಿತಿ ಪಡೆದ ಅಶೋಕ್

ಬೆಳಗಾವಿ ನಗರ ಹೊರವಲಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವೇಳೆ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಣಿಸಿಕೊಂಡಿದ್ದರು. ಇದು ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಬಳಿಕ ಶಾಸಕ ಎಸ್ ​ಟಿ ಸೋಮಶೇಖರ್​ ಅವರಿಂದ ವಿಪಕ್ಷನಾಯಕ ಆರ್​ ಅಶೋಕ್​ ಮಾಹಿತಿ ಕೂಡ ಪಡೆದುಕೊಂಡಿದ್ದರು.

ಡಿಕೆ ಶಿವಕುಮಾರ್​ ಊಟಕ್ಕೆ ಕರೆದಿದ್ದರು, ಅದಕ್ಕೆ ಹೋಗಿದ್ದೆ. ನಾನು ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ನಾನು ವಿಜಯೇಂದ್ರ ಆಯೋಜಿಸಿದ್ದ ಔತಣಕೂಟದಲ್ಲೇ ಊಟ ಮಾಡಿ‌ ಹೋಗಿದ್ದೆ. ನಾನು ಪಕ್ಷ ವಿರೋಧಿ ನಡೆ ಪ್ರದರ್ಶನ ಮಾಡಿಲ್ಲ ಎಂದು ಎಸ್ ​ಟಿ ಸೋಮಶೇಖರ್ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.