ETV Bharat / state

ಸಿನಿಮಾ ನೋಡಿ ಮೆಚ್ಚಿದ ಅಭಿಮಾನಿಗಳಿಗೆ ಉಪೇಂದ್ರ ಹೇಳಿದರು ಐ ಲವ್‌ಯೂ..

ರಾಜ್ಯಾದ್ಯಂತ 350 ಚಿತ್ರಮಂದಿಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 15 ದಿನಗಳನ್ನ ಪೂರೈಸಿ 25ನೇ ದಿನದತ್ತ ಮುನ್ನುಗುತ್ತಿದೆ. ಇದು ಪಕ್ಕಾ ಅಭಿಮಾನಿಗಳ ಸಿನಿಮಾ, ಅವರ ಬಯಕೆಗೆ ತಕ್ಕಂತೆ ಸಿನಿಮಾ ಮಾಡಿದ್ದೀವಿ ಅಂತಾರೆ ಉಪ್ಪಿ.

ನಟ ಉಪೇಂದ್ರ
author img

By

Published : Jun 30, 2019, 5:17 PM IST

ಮೈಸೂರು : ಸ್ಯಾಂಡಲ್‌ವುಡ್ ನ ಬುದ್ಧಿವಂತ ನಟ ಉಪೇಂದ್ರ ಅಭಿನಯದ ಐಲವ್‌ಯೂ ಈ ವರ್ಷದ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಸೂಪರ್ ಸ್ಟಾರ್ ನ್ಯೂ ಗೆಟಪ್‌ಗೆ ಪ್ರೇಕ್ಷಕರು ಪುಲ್ ಫಿದಾ ಆಗಿದ್ದಾರೆ. ಸಿನಿಮಾ ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಉಪ್ಪಿ ಐ ಲವ್ ಯೂ ಎಂದಿದ್ದಾರೆ.

ನಗರದ ಗಾಯತ್ರಿ ಚಿತ್ರಮಂದಿರಕ್ಕೆ ಐಲವ್‌ಯೂ ಚಿತ್ರ ನೋಡಲು ಬಂದ ಉಪ್ಪಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯಾದ್ಯಂತ 350 ಚಿತ್ರಮಂದಿಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 15 ದಿನಗಳನ್ನ ಪೂರೈಸಿ 25ನೇ ದಿನದತ್ತ ಮುನ್ನುಗುತ್ತಿದೆ. ಇದು ಪಕ್ಕಾ ಅಭಿಮಾನಿಗಳ ಸಿನಿಮಾ, ಅವರ ಬಯಕೆಗೆ ತಕ್ಕಂತೆ ಸಿನಿಮಾ ಮಾಡಿದ್ದೀವಿ ಅಂತಾರೆ ಉಪ್ಪಿ.

ಪ್ರಜಾಕೀಯ ಸೌಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಕೀಯ ಅನ್ನೋ ಸಿನಿಮಾ ಎರಡು ವರ್ಷದ ಹಿಂದೆ ಮಾಡಿದ್ದು, ಅದಕ್ಕೆ 2.45 ಲಕ್ಷ ಹೂಡಿಕೆ ಮಾಡಲಾಗಿದೆ. ಚಿತ್ರಕ್ಕೆ ಜನರೇ ಪ್ರೊಡ್ಯೂಸ್​ ಮಾಡ್ತಾರೆ. ಪ್ರಜಾಕೀಯ ಸಿದ್ದಾಂತವನ್ನು ಮುಂದಿನ ದಿನಗಳಲ್ಲಿ ಜನರೇ ಸ್ವೀಕಾರ ಮಾಡ್ತಾರೆ. ಪ್ರಜಾಕೀಯ ನಾಯಕರ ಪಕ್ಷ ಅಂತಾ ನೋಡ್ಬೇಡಿ, ಜನರ ಪಕ್ಷ ಅಂತಾ ನೋಡಿ ಎಂದರು.

ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ನಟ ಉಪೇಂದ್ರ..

ಲೋಕಸಭಾ ಚುನಾವಣೆ ನಂತರ ಪ್ರಜಾಕೀಯ ಅಭ್ಯರ್ಥಿಗಳು ನಾಪತ್ತೆ ವಿಚಾರವಾಗಿ ಮಾತನಾಡಿದ ಉಪೇಂದ್ರ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಕೆಲಸ ಕೊಟ್ರೆ ಕಾಣಿಸ್ತಾರೆ. ‌ಜನರು ಕೆಲಸ ಕೊಟ್ಟಿಲ್ಲ, ಅದಕ್ಕೆ ಕಾಣುತ್ತಿಲ್ಲ ಎಂದು ಹೇಳಿದ್ರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದ್ರೆ ಖಂಡಿತವಾಗಿಯೂ ಸ್ಪರ್ಧೆ ಮಾಡ್ತೀನಿ. ಯುವಕರಿಗೆ ಆದ್ಯತೆ ಕೊಡಬೇಕು ಅನ್ನೋದು ಉದ್ದೇಶ. ಜನರೇ ನಿಜವಾದ ನಾಯಕರು. ಅವ್ರೇ ನಾಯಕರಾಗಬೇಕು. ಜನರ ದುಡ್ಡಿನಿಂದ ದೇಶ ಕಟ್ಟಿರುವುದು. ಯಾರ್ ಮನೆ ದುಡ್ಡಿನಿಂದ ದೇಶ ಕಟ್ಟಿಲ್ಲ. ಎಲ್ಲರೂ ನಾಯಕರ ಜೊತೆ ಹೋಗ್ತಾರೆ, ನಾನು ಜನರ ಜೊತೆ ಇರ್ತೀನಿ ಎಂದರು.

ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರನ್ನು ಒಪ್ಪಿಕೊಂಡರು. ಆದರೆ, ಉಪೇಂದ್ರ ಅವರನ್ನು ಯಾಕೆ ಜನ ಸ್ವೀಕರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸುಮಲತಾ ಅವರಿಗೆ ಅವರದೇ ಆದ ಐಡಿಯಾಲಜಿ ಹಾಗೂ ಚರಿಷ್ಮಾ ಇದೆ. ಅವರು ಗೆದ್ರು ಅಷ್ಟೇ..

ನಾನು ಹೇಳೊದು ಇಷ್ಟೇ. ವ್ಯಕ್ತಿಗಳಿಗೆ, ಪಕ್ಷಕ್ಕೆ ಮನ್ನಣೆ ಸಿಗುವಂತೆ ಆಗಬಾರದು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡುವಂತಹ ವ್ಯವಸ್ಥೆ ಬರಬೇಕು.‌ ಪ್ರಜಾಕೀಯ ಕಾನ್ಸೆಪ್ಟ್ ಕೂಡ ಅದೇ.. ಮುಂದಿನ ದಿನಗಳಲ್ಲಿ ಜನರು ನಮ್ಮನ್ನು ಒಪ್ಪುತ್ತಾರೆ ಎಂದು ಭವಿಷ್ಯ ನುಡಿದ್ರು.

Intro:ನಟ ಉಪೇಂದ್ರ ಬೈಟ್

Body:ನಟ ಉಪೇಂದ್ರ

Conclusion:ಅಭಿಮಾನಿಗಳಿಗೆ 'ಐ ಲವ್ ಯು' ಬುದ್ಧಿವಂತ,ಸಿನೆಮಾ ಗೆಲುವಿನ ಸಂಭ್ರಮದಲ್ಲಿ ಉಪೇಂದ್ರ
ಮೈಸೂರು: 'ನಟ ಉಪೇಂದ್ರ , ರಚಿತರಾಮ್, ಸೋನುಗೌಡ ಅಭಿನಯದ 'ಐ ಲವ್ ಯು' ಸಿನೆಮಾವನ್ನು ಅಭಿಮಾನಿಗಳು ನೋಡಿ ಮೆಚ್ಚಿಗೆ ವ್ಯಕ್ತಪಡಿಸಿರುವುದರಿಂದ ಐ ಲವ್ ಯು ಎಂದು ನಟ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.
ಮೈಸೂರಿಂದ ಗಾಯತ್ರಿ ಚಿತ್ರಮಂದಿರದಲ್ಲಿ ಐ ಲವ್ ಯು ಸಿನಿಮಾ ನೋಡಲು ಬಂದ ನಟ ಉಪೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿ ,ರಾಜ್ಯದಾದ್ಯಂತ 350 ಚಿತ್ರಮಂದಿರಗಳಲ್ಲಿ ಐ ಲವ್ ಯು ಸಿನಿಮಾ ಯಶಸ್ವಿ ಕಾಣುತ್ತಿದೆ .ಈಗಾಗಲೇ 25 ದಿನಗಳನ್ನು ಪೂರೈಸಿ 50ದಿನಗಳಿಂದ ಸಾಗುತ್ತಿದೆ ಐ ಲವ್ ಯು ಸಿನಿಮಾ ಗೆಲ್ಲಿಸಿದ ಜನರಿಗೆ ಐ ಲವ್ ಯು ಅರ್ಪಿಸಿದರು.
ಸಿನೆಮಾದಲ್ಲಿ ಯಾವುದೇ ದೃಶ್ಯಗಳನ್ನು ಎಡಿಟ್ ಮಾಡಿಸಿಲ್ಲ. ಮಾಡಿಸುವುದಿಲ್ಲ.‌ಅಭಿಮಾನಿಗಳಿಗೆ ತಕ್ಕಂತ ಸಿನೆಮಾ ನೀಡಿದ್ದಿವಿ ಎಂದರು.
ರಾಜಕೀಯ:
ಪ್ರಜಾಕೀಯ ಸೌಂಡಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಉಪೇಂದ್ರ, ಸಿನಿಮಾದಂತೆ ಪ್ರಜಾಕೀಯದಲ್ಲಿ ಜನರು ನಿರೀಕ್ಷೆ ಮಾಡುತ್ತಿದ್ದಾರೆ‌.ಪ್ರಜಾಕೀಯ ಅನ್ನೋ ಚಿತ್ರ ಎರಡು ವರ್ಷದ ಹಿಂದೆ ಮಾಡಿದ್ದೇನೆ 2.45 ಲಕ್ಷ ಹೂಡಿಕೆ ಮಾಡಲಾಗಿದೆ. ಚಿತ್ರ ಜನರೇ ಪ್ರೂಡ್ಯೂಸರ್೯ ಮಾಡ್ತಾರೆ ಎಂದರು
ಪ್ರಜಾಕೀಯ ಪಕ್ಷದ ಸಿದ್ಧಾಂತವನ್ನು ಜನರು ಮುಂದಿನ ದಿನಗಳಲ್ಲಿ ಸ್ವೀಕರಿಸುತ್ತಾರೆ .ಪ್ರಜಾಕೀಯ ಪಕ್ಷ ಅಂತ ನೋಡಬೇಡಿ ಜನರ ಪಕ್ಷ ನೋಡಿ.ಲೋಕಸಭಾ ಚುನಾವಣೆ ನಂತರ ಪ್ರಜಾಕೀಯ ಅಭ್ಯರ್ಥಿಗಳು ನಾಪತ್ತೆ ವಿಚಾರವಾಗಿ ಮಾತನಾಡಿದವರು ಅವರು, ಲೋಕಸಭಾ ಚುನಾವಣೆ ಚುನಾವಣೆಯಲ್ಲಿ ಗೆಲ್ಲಿಸಿ ಕೆಲಸ ಕೊಟ್ರೆ ಕಾಣಿಸುತ್ತಾರೆ.‌ಜನರು ನೀವು ಕೆಲಸ ಕೊಟ್ಟಿಲ್ಲ ಅದಕ್ಕೆ ಕಾಣುತ್ತಿಲ್ಲ ಎಂದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೆ ಖಂಡಿತವಾಗಿಯೂ ಸ್ಪರ್ಧೆ ಮಾಡ್ತೀನಿ. ಯುವಕರಿಗೆ ಆದ್ಯತೆ ಕೊಡಬೇಕು ಅನ್ನೋದು ಉದ್ದೇಶ . ಜನರೇ ನಿಜವಾದ ನಾಯಕರು. ಜನರ ನಾಯಕರಾಗಬೇಕು.
ಜನರ ದುಡ್ಡಿನಿಂದ ದೇಶ ಕಟ್ಟಿರುವುದು.ಯಾರು ಮನೆಯಿಂದ ದುಡ್ಡಿ ತಂದು ದೇಶ ಕಟ್ಟಿಲ್ಲ ಎಲ್ಲರೂ ನಾಯಕರ ಜೊತೆ ಹೋಗ್ತಾರೆ ನಾನು ಜನ ಜೊತೆ ಇರ್ತೀನಿ ಎಂದರು.

ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರನ್ನು ಒಪ್ಪಿಕೊಂಡರು ,ಆದರೇ ಉಪೇಂದ್ರ ಅವರನ್ನು ಯಾಕೆ ಜನ ಸ್ವೀಕರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದವರು ಅವರು.ಸುಮಲತಾ ಅವರಿಗೆ ಅವರದೇ ಆದ ಐಡಿಯಾಲಜಿ ಹಾಗೂ ಚರಿಸ್ಮ ಅವರಿಗೂ ನಮಗೂ ಹೊಲಿಕೆ ಮಾಡಬಹುದು ಎಂದು ತಿಳಿಸಿದರು.
ವ್ಯಕ್ತಿಗಳಿಗೆ ಪಕ್ಷಕ್ಕೆ ಮನ್ನಣೆ ಸಿಗುವಂತೆ ಆಗಬಾರದು.ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡುವಂತಹ ವ್ಯವಸ್ಥೆ ಬರಬೇಕು.‌ ಪ್ರಜಾಕೀಯ ಕಾನ್ಸಪ್ಟ್ ಕೂಡ ಅದೇ ಮುಂದಿನ ದಿನಗಳಲ್ಲಿ ಜನರು ನಮ್ಮನ್ನು ಒಪ್ಪುತ್ತಾರೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.