ETV Bharat / state

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಚ್​.ವಿಶ್ವನಾಥ್ ರಾಜೀನಾಮೆ?!

ಪಕ್ಷದ ನಿಲುವುಗಳಿಂದ ಬೇಸರಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ವಿಶ್ವನಾಥ್​ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಅನ್ನೋದು ಅವರ ಆಪ್ತ ಮೂಲಗಳಿಂದ ಖಚಿತವಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್
author img

By

Published : Jun 3, 2019, 1:37 AM IST

ಮೈಸೂರು: ಲೋಕಸಭಾ ಫಲಿತಾಂಶದ ಬಳಿಕ ಕಂಗೆಟ್ಟಿರುವ ಜೆಡಿಎಸ್​ನಲ್ಲೀಗ ಮತ್ತೊಂದು ಮಹತ್ತರ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಪಕ್ಷದ ನಿಲುವುಗಳಿಂದ ಬೇಸರಗೊಂಡಿರುವ ಹೆಚ್. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ ಅನ್ನೋದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಾನು ಹೇಳಿದವರಿಗೆ ಟಿಕೆಟ್ ನೀಡಲಿಲ್ಲವೆಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಹೆಚ್.ವಿಶ್ವನಾಥ್, ಈಗ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ. ತಮ್ಮದೇ ಪಕ್ಷದ ಸಚಿವ ಸಾ.ರಾ. ಮಹೇಶ್​ ವಿರುದ್ದವೂ ಅವರು ಬೇಸರ ಹೊರಹಾಕಿದ್ದರು. ಈಗಾಗಲೇ ಎರಡು ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಅವರು, ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರ ಮನವೊಲಿಕೆಯಿಂದ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಆದ್ರೀಗ ಪಕ್ಷದಲ್ಲಿಯೇ ನಡೆಯುತ್ತಿರುವ ಕೆಲ ರಾಜಕೀಯ ಚಟುವಟಿಕೆಯಿಂದ ಹೆಚ್.​ ವಿಶ್ವನಾಥ್​ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದು, ಹುಣಸೂರು ಶಾಸಕರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗ್ತಿದೆ.

Intro:ವಿಶ್ವನಾಥ್Body:ಮೈಸೂರು: ಪಕ್ಷದ ನಿಲುವುಗಳಿಂದ ಬೇಸರಗೊಂಡಿರುವ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಲಿದ್ದಾರೆ ಬಲ್ಲ ಮೂಲಗಳಿಂದ ಖಚಿತವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾನು ಹೇಳಿದವರಿಗೆ ಟಿಕೆಟ್ ನೀಡಲಿಲ್ಲವೆಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಎಚ್.ವಿಶ್ವನಾಥ್, ಅವರು ತಮ್ಮ ಪಕ್ಷದ ಸಚಿವ ಸಾ.ರಾ.ಮಹೇಶ್ ವಿರುದ್ದ ಬೇಸರ ವ್ಯಕ್ತಪಡಿಸಿದ್ದರು.
ಎರಡು ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಯತ್ನಿಸಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರನ್ನು ಸಂಪರ್ಕಿಸಿದರು.ಆದರೆ ದೇವೇಗೌಡರು ಸ್ಥಾನ ತೊರೆಯದಂತೆ ಸೂಚನೆ ನೀಡಿದ್ದರಿಂದ ಮುಂದುವರೆಯುತ್ತಿದ್ದರು.ಆದರೀಗ ಪಕ್ಷದಲ್ಲಿಯೇ ನಡೆಯುತ್ತಿರುವ ಚಟುವಟಿಕೆಯಿಂದ ಬೇಸರಗೊಂಡಿರುವ ವಿಶ್ವನಾಥ್, ಅವರು ಸೋಮವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಹುಣಸೂರು ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. Conclusion:ವಿಶ್ವನಾಥ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.