ETV Bharat / state

ವಕೀಲರ ಕಚೇರಿಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ ಪತಿ! - ‘Piriyapatana Police Station

ವಿಚ್ಛೇದನ ವಿಚಾರವಾಗಿ ವಕೀಲರ ಜೊತೆ ಮಾತನಾಡಲು ಪತಿ-ಪತ್ನಿ ಇಬ್ಬರೂ ಕಚೇರಿಗೆ ಬಂದಿದ್ದರು. ಈ ವೇಳೆ ಪತಿ ರಘು ವಕೀಲರ ಕಚೇರಿಯಲ್ಲೇ ಚಾಕುವಿನಿಂದ ಪತ್ನಿಗೆ ಇರಿದಿದ್ದು, ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

husband stabbed his wife in advocate office
ವಕೀಲರ ಕಚೇರಿಯಲ್ಲೆ ಪತ್ನಿಗೆ ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ ಪಾಪಿ ಪತಿ
author img

By

Published : Aug 10, 2020, 5:08 PM IST

ಮೈಸೂರು: ವಿಚ್ಛೇದನ‌ ವಿಚಾರದಲ್ಲಿ ವಕೀಲರ ಕಚೇರಿಗೆ ಬಂದ ಪತ್ನಿಗೆ ಚಾಕುವಿನಿಂದ ಪತಿ ಇರಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡಹೊನ್ನುರು ಗ್ರಾಮದ ನಿವಾಸಿ ರಘು ಎಂಬಾತ ಕಳೆದ 5 ವರ್ಷಗಳ‌ ಹಿಂದೆ ಮಮತ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಆದರೆ ಕೌಟುಂಬಿಕ ಕಲಹದಿಂದ‌ ಕೆಲವು ತಿಂಗಳ‌ ಹಿಂದೆ ಪತಿಗೆ ವಿಚ್ಛೇದನ ನೀಡಲು ವಕೀಲರಿಂದ ನೋಟಿಸ್ ಕೊಡಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ

ಇಂದು ಈ ವಿಚಾರವಾಗಿ ವಕೀಲರ ಜೊತೆ ಮಾತನಾಡಲು ಪತಿ-ಪತ್ನಿ ಇಬ್ಬರೂ ವಕೀಲರ ಕಚೇರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ವಕೀಲರು ನ್ಯಾಯಾಲಯಕ್ಕೆ ತೆರಳಿದ್ದಾರೆ. ಆಗ ರಘು ವಕೀಲರ ಕಚೇರಿಯಲ್ಲೇ ಚಾಕುವಿನಿಂದ ಪತ್ನಿಗೆ ಇರಿದಿದ್ದು, ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಪತ್ನಿ ಮಮತಾಳನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಪಿರಿಯಾಪಟ್ಟಣ ಪೋಲಿಸರು ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.