ETV Bharat / state

ಪ್ರತಿಯೊಂದು ರೋಗಕ್ಕೆ ಹಾಸ್ಯ ಉತ್ತಮವಾದ ರಾಮಬಾಣ: ಸುಮಲತಾ ಅಂಬರೀಷ್ - ಚುಟುಕು ಹಾಸ್ಯೋತ್ಸವ ಕಾರ್ಯಕ್ರಮ

ಚುಟುಕು ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಕಷ್ಟಗಳನ್ನು ಮರೆತು ಆರೋಗ್ಯದಿಂದ ಇರಲು ಹಾಗೂ ಪ್ರತಿಯೊಂದು ರೋಗಕ್ಕೂ ಹಾಸ್ಯ ಉತ್ತಮವಾದ ರಾಮಬಾಣ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಮೈಸೂರಿನಲ್ಲಿ ಹೇಳಿದರು.

ಸುಮಲತಾ ಅಂಬರೀಷ್
author img

By

Published : Oct 4, 2019, 5:58 PM IST

ಮೈಸೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಎಲ್ಲ ಕಷ್ಟಗಳನ್ನು ಮರೆತು ಆರೋಗ್ಯದಿಂದ ಇರಲು ಹಾಗೂ ಪ್ರತಿಯೊಂದು ರೋಗಕ್ಕೂ ಹಾಸ್ಯ ಉತ್ತಮವಾದ ರಾಮಬಾಣ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರು ಹೇಳಿದರು.

ನಾಡ ಹಬ್ಬ ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಚುಟುಕು ಹಾಸ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ದಸರಾ ಮಹೋತ್ಸವಕ್ಕೆ ಆಹ್ವಾನಿಸಿದ ಸಚಿವರಿಗೆ ಧನ್ಯವಾದವನ್ನು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ದಸರಾದಲ್ಲಿ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಇನ್ನು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣನವರು ಮಾತನಾಡಿ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಕಳೆದ ಮೂರು ದಿನಗಳಿಂದ ಬಹಳ ಅಚ್ಚುಕಟ್ಟಾಗಿ ಎಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Intro:ಸುಮಲತಾBody:ಪ್ರತಿಯೊಂದು ರೋಗಕ್ಕೆ ಹಾಸ್ಯ ಉತ್ತಮವಾದ ರಾಮಬಾಣ:ಸುಮಲತಾ ಅಂಬರೀಷ್

ಮೈಸೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಎಲ್ಲ ಕಷ್ಟಗಳನ್ನು ಮರೆತು ಆರೋಗ್ಯದಿಂದ ಇರಲು ಹಾಗೂ ಪ್ರತಿಯೊಂದು ರೋಗಕ್ಕೂ ಹಾಸ್ಯ ಉತ್ತಮವಾದ ರಾಮಬಾಣ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರು ಹೇಳಿದರು.

ನಾಡ ಹಬ್ಬ ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಚುಟುಕು ಹಾಸ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮೈಸೂರು ದಸರಾ ಮಹೋತ್ಸವಕ್ಕೆ ಆಹ್ವಾನಿಸಿದ ಸಚಿವರಿಗೆ ಧನ್ಯವಾದವನ್ನು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ  ಮಹಿಳಾ ದಸರಾದಲ್ಲಿ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

ತಾವು ಹುಟ್ಟಿ ಬೆಳೆದ ಮೈಸೂರು ನಗರಕ್ಕೆ ಬಂದಿದ್ದೇನೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಸ್ವಾಗತಿಸುತ್ತಿರುವುದಕ್ಕೆ ಸಂತೋಷವಾಗಿದ್ದು, ನಿಮ್ಮ ಪ್ರೀತಿ ವಿಶ್ವಾಸದ ಬೆಂಬಲ ಸದಾ ಇರಲಿ ಎಂದು ಕೇಳಿಕೊಂಡರು.

ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣಾವರು ಮಾತನಾಡಿ ಉಸ್ತುವಾರಿ ಸಚಿವರಾಗಿ  ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಕಳೆದ ಮೂರು ದಿನಗಳಿಂದ ಬಹಳ ಅಚ್ಚುಕಟ್ಟಾಗಿ ಎಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.Conclusion:ಸುಮಲತಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.