ETV Bharat / state

ಹುಣಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್‌.ಪಿ. ಮಂಜುನಾಥ್ ನಾಮಪತ್ರ ಸಲ್ಲಿಕೆ: ರಂಗೇರಿದ ಅಖಾಡ

ಹುಣಸೂರು ವಿಧಾನಸಭಾ ಉಪಚುನಾವಣೆಗೆ ಹೆಚ್.ಪಿ ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್‌.ಪಿ ಮಂಜುನಾಥ್ ನಾಮಪತ್ರ ಸಲ್ಲಿಕೆ
author img

By

Published : Nov 13, 2019, 2:53 PM IST

ಮೈಸೂರು: ಸುಪ್ರೀಂಕೋರ್ಟ್ ಅನರ್ಹರ ಪರ ತೀರ್ಪು ಪ್ರಕಟಿಸುತ್ತಿದ್ದಂತೆ ರಾಜ್ಯದ ಉಪಚುನಾವಣೆ ಮತ್ತಷ್ಟು ರಂಗೇರಿದೆ. ಹುಣಸೂರು ವಿಧಾನಸಭಾ ಉಪಚುನಾವಣೆಗೆ ಹೆಚ್.ಪಿ. ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್‌.ಪಿ. ಮಂಜುನಾಥ್ ನಾಮಪತ್ರ ಸಲ್ಲಿಕೆ

ಬೆಳಗ್ಗೆ ಸಾಯಿಬಾಬಾ, ಆಂಜನೇಯ ದೇವಸ್ಥಾನ, ಮಸೀದಿಗಳಿಗೆ ಭೇಟಿ ನೀಡಿದ್ದ ಅವರು ಅಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದರು. ಅಲ್ಲಿಂದ ಹುಣಸೂರು ತಾಲೂಕು ಕಚೇರಿಗೆ ತಾಯಿಯೊಂದಿಗೆ ಆಗಮಿಸಿದ ಹೆಚ್‌.ಪಿ ಮಂಜುನಾಥ್ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಣಸೂರು ತಾಲೂಕಿಗೆ ಅನಿರೀಕ್ಷಿತವಾಗಿ ಉಪಚುನಾವಣೆ ಬರುವಂತೆ ಮಾಡಿದ್ದಾರೆಂದರು. ಜೊತೆಗೆ ಸುಪ್ರೀಂ ಕೋರ್ಟ್ ಇಂದು ಉತ್ತಮ ತೀರ್ಪು ನೀಡಿದೆ ಎಂದು ಸ್ವಾಗತಿಸಿದರು.

ದೇವರಾಜ ಅರಸು ಅವರ ಹೆಸರೇಳಿ ಮತ ಪಡೆದರು, ಗೆದ್ದ ಮೇಲೆ ಕ್ಷೇತ್ರದ ಅಭಿವೃದ್ಧಿ ಮರೆತು ಅಧಿಕಾರದ ಆಸೆಗೆ ರಾಜೀನಾಮೆ ನೀಡಿ‌ದ್ದಾರೆ. ಹೆಚ್​ ವಿಶ್ವನಾಥ್​ ಅವರಿಗೆ ಜನರು ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಮಂಜುನಾಥ್​ ಗುಡುಗಿದರು.

ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹ ಶಾಸಕರ ಹಲವು ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ‌.ಹಣದ ಹೊಳೆ ಹರಿಸಿದ್ದಾರೆ. ಆದರೆ, ಈ ಕ್ಷೇತ್ರದಿಂದ ಗೆದ್ದ ವ್ಯಕ್ತಿ ಎಷ್ಟು ಜನರ ಅಭಿವೃದ್ಧಿ ಮಾಡಿದ್ದಾರೆಂದು ಪ್ರಶ್ನಿಸಿದರು. ನಾವು ನ. 15 ರಿಂದ ಪ್ರಚಾರ ಆರಂಭಿಸುತ್ತೇವೆ, ಪಕ್ಷದ ಎಲ್ಲ ಮುಖಂಡರು ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಮಂಜುನಾಥ್​ ತಿಳಿಸಿದರು.

Intro:ಎಚ್‌.ಪಿ.ಮಂಜುನಾಥ್ ನಾಮಪತ್ರ ಸಲ್ಲಿಕೆ

Body:ಎಚ್‌.ಪಿ.ಮಂಜುನಾಥ್ ನಾಮಪತ್ರ ಸಲ್ಲಿಕೆ

Conclusion:ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಕೆ
ಅರಸ್ ಹೆಸರೇಳಿ ಗೆದ್ದವರು ಧೂಳಿಗೆ ಸಮವಿಲ್ಲ:
ಮೈಸೂರು: ಅನರ್ಹರ ತೀರ್ಪು ಸುಪ್ರೀಂಕೋರ್ಟ್ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯದ ಉಪಚುನಾವಣೆ ಮತ್ತಷ್ಟು ರಂಗೇರಿದ್ದು, ಹುಣಸೂರು ವಿಧಾನಸಭಾ ಉಪಚುನಾವಣೆ ಎಚ್.ಪಿ.ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಳ್ಳಿಗೆ ಸಾಯಿಬಾಬಾ, ಆಂಜನೇಯ ದೇವಸ್ಥಾನ ,ಮಸೀದಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿ ಮಾತನಾಡಿ ,ಬಳಿಕ ಹುಣಸೂರು ತಾಲ್ಲೂಕು ಕಚೇರಿ ತಾಯಿಯೊಂದಿಗೆ ಆಗಮಿಸಿದ ಎಚ್‌.ಪಿ.ಮಂಜುನಾಥ್ , ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಂಜುನಾಥ್, ಹುಣಸೂರು ತಾಲ್ಲೂಕಿಗೆ ಅನಿರೀಕ್ಷಿತವಾಗಿ ಉಪಚುನಾವಣೆ ಬರುವಂತೆ ಮಾಡಿದ್ದಾರೆ ಈ ಕ್ಷೇತ್ರದಿಂದ ಗೆದ್ದವರು.ಸುಪ್ರೀಂಕೋರ್ಟ್ ಇಂದು ಉತ್ತಮ ತೀರ್ಪು ನೀಡಿದೆ ಎಂದರು.
ದೇವರಾಜ ಅರಸು ಅವರ ಧೂಳಿಗೆ ಸಮನಿಲ್ಲದ ವ್ಯಕ್ತಿ,ಅವರ ಹೆಸರೇಳಿ ಮತ ಪಡೆದರು.ಗೆದ್ದ ಮೇಲೆ ಕ್ಷೇತ್ರದ ಅಭಿವೃದ್ಧಿ ಮರೆತು ಅಧಿಕಾರದ ಆಸೆಗೆ ರಾಜೀನಾಮೆ ನೀಡಿ‌,ಚುನಾವಣೆ ಎದುರಾಗುವಂತೆ ಮಾಡಿದ್ದಾರೆ.ಜನರು ತಕ್ಕ ಪಾಠ ಕಲಿಸುವ ದಿನ ಬಂದಿದೆ ಎಂದು ಗುಡುಗಿದರು.
ಮುಖ್ಯಮಂತ್ರಿಗಳು ಅನರ್ಹ ಶಾಸಕರ ಹಲವು ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ‌.ಹಣದ ಹೊಳೆ ಹರಿಸಿದ್ದಾರೆ.ಆದರೆ,ಈ ಕ್ಷೇತ್ರದಿಂದ ಗೆದ್ದ ವ್ಯಕ್ತಿ ಎಷ್ಟು ತಂದು ಜನರ ಅಭಿವೃದ್ಧಿ ಮಾಡಿದರು ಎಂದು ಪ್ರಶ್ನಿಸಿದರು.
15ರಿಂದ ಪ್ರಚಾರ ಆರಂಭಿಸುತ್ತೀನಿ.ಪಕ್ಷದ ಎಲ್ಲ ಮುಖಂಡರು ಪ್ರಚಾರಕ್ಕೆ ಆಗಮಿಸುತ್ತಾರೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.