ETV Bharat / state

ನಂಜನಗೂಡಿನಲ್ಲಿ ಕಳ್ಳರಿಗೆ ಶಿಕ್ಷಕರ ಮನೆಗಳೇ ಟಾರ್ಗೆಟ್ - Etv Bharat Kannada

ಶಾಲಾ ಶಿಕ್ಷಕ ಹೆಂಡತಿ ಮನೆಗೆ ತೆರಳಿದ್ದ ವೇಳೆ, ಮನೆಗೆ ನುಗ್ಗಿದ ಕಳ್ಳರು ಮನೆ ಬೀಗ ಒಡೆದು ಚಿನ್ನ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

KN_MY
ನಂಜನಗೂಡಿನಲ್ಲಿ ಶಿಕ್ಷಕನ ಮನೆ ಕಳ್ಳತನ
author img

By

Published : Oct 15, 2022, 7:00 PM IST

ಮೈಸೂರು: ಕಳೆದ 25 ದಿನಗಳಲ್ಲಿ ನಂಜನಗೂಡು ಪಟ್ಟಣದಲ್ಲಿ ಹಾಡಹಗಲೇ ಶಿಕ್ಷಕರ ಮನೆಯಲ್ಲಿ ಕಳ್ಳತನವಾಗಿದ್ದು, ಅದು ಮಾಸುವ ಮುನ್ನವೇ, ಶುಕ್ರವಾರ ಅದೇ ಬಡಾವಣೆಯಲ್ಲಿ ಮತ್ತೊಬ್ಬ ಶಿಕ್ಷಕರ ಮನೆಯಲ್ಲಿ ಕಳ್ಳತನವಾಗಿರುವ ಪ್ರಕರಣ ನಡೆದಿದೆ.

ನಂಜನಗೂಡು ಪಟ್ಟಣದ ರಾಮಸ್ವಾಮಿ ಲೇಔಟ್​ನ ಎರಡನೇ ಬ್ಲಾಕ್​ನಲ್ಲಿ ವಾಸವಿರುವ ಸೋಮಳ್ಳಿ ಶಾಲೆಯ ಶಿಕ್ಷಕ ಮಾದೇಶ್ ಎಂಬುವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೂ ಇಲ್ಲದ ಸಮಯ ನೋಡಿ ಕಬ್ಬಿಣದ ಸಲಾಕೆಯಿಂದ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಸುಮಾರು 65 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಹೆಂಡತಿಯ ಮನೆಗೆ ಹೋಗಿದ್ದ ಶಿಕ್ಷಕ ಮಾದೇಶ್ ಬೆಳಗ್ಗೆ ಬರುವಷ್ಟರಲ್ಲಿ ಕಳ್ಳರು ಕನ್ನ ಹಾಕಿದ್ದಾರೆ.

ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಮನೆಯನ್ನೆಲ್ಲ ಶೋಧಿಸಿ ಕಬೋರ್ಡಿನಲ್ಲಿಟ್ಟಿದ್ದ ಚಿನ್ನದ ಒಂದು ಲಾಂಗ್​ ಸರ ಎರಡು ಉಂಗುರ ಒಂದು ಜೊತೆ ಓಲೆ ಸೇರಿ ಸುಮಾರು 65 ಗ್ರಾಂ ಚಿನ್ನವನ್ನು ಕದ್ದೊಯ್ದಿದ್ದಾರೆ.

ಕಳೆದ 25 ದಿನಗಳ ಹಿಂದೆ ಇದೇ ಬಡಾವಣೆಯಲ್ಲಿ ಹಾಡಹಗಲೇ ಶಿಕ್ಷಕರೊಬ್ಬರ ಹೆಂಡತಿಯನ್ನು ಕಟ್ಟಿಹಾಕಿ ಬೆದರಿಸಿ ಚಿನ್ನಾಭರಣ ಕದ್ದು ಹೋಗಿರುವ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ನಂಜನಗೂಡು ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನ ಭಾರತ್ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.