ಮೈಸೂರು : ನಟ ದರ್ಶನ್ ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಗಂಗಾಧರ್ ಅವರಿಂದ ಹೋಟೆಲ್ ಕಾರ್ಮಿಕರ ಸಂಘದ ಸದಸ್ಯರು ಮಾಹಿತಿ ಪಡೆದಿದ್ದಾರೆ.
ಸಂದೇಶ್ ದಿ ಪ್ರಿನ್ಸ್ ನೌಕರರಾದ ಗಂಗಾಧರ್ ಅವರನ್ನು ಭೇಟಿ ಮಾಡಿ, ದರ್ಶನ್ ಹಲ್ಲೆ ಮಾಡಿರುವ ಘಟನೆಯ ಮಾಹಿತಿ ಪಡೆದರು. ಅಲ್ಲದೇ, ಹೋಟೆಲ್‌ನ ಕೆಲ ಸಿಬ್ಬಂದಿಯಿಂದ ಕೂಡ ಮಾತನಾಡಿಸಿ ಮಾಹಿತಿ ಸಂಗ್ರಹಿಸಿದರು.
ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರಿಯಾ ರಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಯಾರಿಂದಲೂ ಹಲ್ಲೆ ಆಗಿಲ್ಲ. ಸಪ್ಲೈ ಮಾಡಲು ತಡವಾಗಿದ್ದ ಕಾರಣ ದರ್ಶನ್ ಬೈಯ್ದಿದ್ದಾರೆ ಎಂದು ಗಂಗಾಧರ್ ಮಾಹಿತಿ ನೀಡಿದ್ದಾರೆ ಎಂದರು. ಗಂಗಾಧರ್ ಅವರಿಗೆ ಯಾರು ಬೆದರಿಕೆ ಹಾಕಿದ್ದಾರೆ? ಬೆದರಿಕೆ ಹಾಕಿದ್ದರೆ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸತ್ಯ ಹೊರತರಬೇಕು ಎಂದು ಆಗ್ರಹಿಸಿದರು.
ಓದಿ: ವಿಧಾನಸೌಧದ ಕಾರಿಡಾರ್ನಲ್ಲಿ ಮಾಧ್ಯಮಕ್ಕೆ ನಿರ್ಬಂಧ ; ಸರ್ಕಾರದಿಂದ ಹೊರಬಿತ್ತು ವಿವಾದಾತ್ಮಕ ಆದೇಶ