ಮೈಸೂರು: ಕೊಡಗಿನ ನಿರಾಶ್ರಿತರಿಗೆ ಕಟ್ಟಿರುವ ಮನೆಗಳು ಸರಿಯಿಲ್ಲ ಅದನ್ನು ನೋಡಿ ನನಗೆ ತುಂಬಾ ಬೇಸರವಾಯಿತು ಎಂದು ನಟಿ ಹರ್ಷಿಕ ಪೂಣಚ್ಛ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಖಾಸಗಿ ಹೋಟೆಲ್ಗೆ ಆಗಮಿಸಿದ ನಟಿ ಹರ್ಷಿಕಾ ಪೂಣಚ್ಛ ಮಾಧ್ಯಮಗಳ ಜೊತೆ ಮಾತನಾಡಿ, ಕೊಡಗಿನವರು ಸ್ವಾಭಿಮಾನದವರು ಅವರಿಗೂ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಸ್ವಚ್ಛ ಮನೆ ಕಟ್ಟಬೇಕು. ಕೊಡಗಿನಲ್ಲಿ ಈಗ ಕೆಲವು ಮನೆಗಳನ್ನು ಕಟ್ಟಿದ್ದಾರೆ. ಅದು ಸರಿಯಿಲ್ಲ ಅದನ್ನು ನೋಡಿದ ನನಗೆ ತುಂಬಾ ಬೇಜಾರಾಯಿತು. ದಯವಿಟ್ಟು ಈ ರೀತಿ ಮನೆ ಕಟ್ಟಬೇಡಿ, ಮಾಡಿಕೊಡೋದಾದರೆ ಚೆನ್ನಾಗಿರುವ ಮನೆ ಕಟ್ಟಿಕೊಡಿ ಹಿಂದೇ ಹೇಗಿತ್ತೋ ಹಾಗೆ ಕಟ್ಟಿ ಕೊಡಿ ಎಂದರು.
ಇನ್ನೂ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತುಂಬಾ ಅಗತ್ಯ ಇದೆ. ಇದರ ಅಭಿಯಾನದಲ್ಲಿ ನಾನು ಕೂಡ ಶಿವಣ್ಣನ ನಂತರ ಭಾಗವಹಿದ್ದೇನೆ. ಏನಾದರೂ ಆದರೆ 150 ಕಿಲೊಮೀಟರ್ ಮೈಸೂರು ಅಥವಾ ಬೆಂಗಳೂರಿಗೆ ಬರಬೇಕು. ಹೀಗಾಗಿ ನಮಗೆ ಉತ್ತಮ ಆಸ್ಪತ್ರೆ ಅವಶ್ಯಕತೆ ಇದೆ ಎಂದರು. ತಮ್ಮ ತಂದೆಗೆ ಹುಷಾರಿಲ್ಲದ ಸಂದರ್ಭದಲ್ಲಿ ಬೆಂಗಳೂರಿಗೆ ಕೆರದುಕೊಂಡು ಹೋಗಬೇಕಾಯಿತು ಎಂದು ಘಟನೆಯನ್ನು ವಿವರಿಸಿ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಎದ್ದಿರುವ ಅಭಿಯಾನಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು.