ETV Bharat / state

ರವಿ ಡಿ ಚೆನ್ನಣ್ಣನವರ ವಿರುದ್ಧದ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ - ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ ವಿರುದ್ಧ ಅಕ್ರಮ ಆರೋಪ

Home minister Araga Jnanendra reaction on IPS officer Ravi Channannanavar: ರವಿ ಡಿ ಚೆನ್ನಣ್ಣನವರ ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ. ಅದು ಶಿಕ್ಷೆ ಮತ್ತು ಬೇರೇನೂ ಅಲ್ಲ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ರವಿ ಡಿ ಚೆನ್ನಣ್ಣನವರ ವಿರುದ್ಧದ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ

author img

By

Published : Feb 2, 2022, 5:43 PM IST

Updated : Feb 2, 2022, 5:55 PM IST

ಮೈಸೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ ವಿರುದ್ಧ ಕೇಳಿಬಂದಿರುವ ಅಕ್ರಮ ಆಸ್ತಿ ಸಂಪಾದನೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ನಗರದ ಕರ್ನಾಟಕ ಪೊಲೀಸ್​ ಅಕಾಡೆಮಿಯಲ್ಲಿ 228 ಪ್ರೊಬೆಷನರಿ ಪಿಎಸ್ಐ ಗಳ ಪಥ ಸಂಚಲನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ ವಿರುದ್ಧ ಕೇಳಿಬಂದ ಆರೋಪದ ದೂರಿನ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿದೆ. ಯಾರು ಬೇಕಾದರೂ ಯಾರ ಮೇಲಾದರೂ ಆರೋಪ ಮಾಡಬಹುದು. ಆದ್ರೆ ತನಿಖೆಯಿಂದ ಸತ್ಯ ಗೊತ್ತಾಗುತ್ತದೆ ಎಂದರು.

ರವಿ ಡಿ ಚೆನ್ನಣ್ಣನವರ ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ. ಅದು ಶಿಕ್ಷೆ ಮತ್ತು ಬೇರೇನೂ ಅಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್​ ಬಹಳ ಮುಖ್ಯ. ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತಹ ಕೆಲಸವನ್ನ ಮಾಡಿ ಎಂದು ಇದೇ ವೇಳೆ ಗೃಹ ಸಚಿವರು ಇಲಾಖೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ:ರವಿ ಡಿ ಚೆನ್ನಣ್ಣನವರ್ ಸೇರಿ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಇತ್ತೀಚಿಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಪೊಲೀಸರು ಸೈಬರ್ ಪ್ರಕರಣಗಳ ಬಗ್ಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು‌. ಈ ವರ್ಷ ರಾಜ್ಯದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ 100 ಪೊಲೀಸ್​ ಠಾಣೆಗಳನ್ನ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಜೊತೆಗೆ ಪೊಲೀಸರ ವಸತಿ ಗೃಹಗಳನ್ನೂ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಸಂಬಳಕ್ಕಾಗಿ ಕೆಲಸ ಮಾಡದೆ ಸಮಾಜದ ಒಳಿತಿಗಾಗಿ ಸೇವೆ ಮಾಡಬೇಕು ಎಂದ ಸಚಿವರು, ಕೆಲ ಪೊಲೀಸರ ನಡವಳಿಕೆ ನೋಡಿದಾಗ ತಲೆ ತಗ್ಗಿಸುವಂತಾಗುತ್ತದೆ.‌ ಆ ರೀತಿ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಉಸ್ತುವಾರಿ ಸಚಿವರ ಬದಲಾವಣೆಯ ವಿಚಾರ ಸಿಎಂಗೆ ಬಿಟ್ಟಿದ್ದು. ಅವರು ಏನು ಬೇಕಾದರೂ ನಿರ್ಧಾರ ಕೈಗೊಳ್ಳಬಹುದು. ಈ ಬಾರಿ ಬಜೆಟ್​​ನಲ್ಲಿ ಗೃಹ ಇಲಾಖೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ಸಿಗಲಿದೆ ಎಂಬ ಭರವಸೆಯನ್ನ ವ್ಯಕ್ತಪಡಿಸಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 5:55 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.