ETV Bharat / state

ಕ್ರಿಮಿನಲ್‌ಗಳಿಗೆ ಪೊಲೀಸರು ಟೆರರ್ ಆಗಿರಬೇಕು.. ಖಾಕಿಗೆ ಸಚಿವ ಆರಗ ಜ್ಞಾನೇಂದ್ರ 'ತಿವಿ' ಮಾತು.. - ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿಕೆ

ಮಹಿಳೆ ಅಬಲೆ ಅಂತಾ ಏಕೆ ಹೇಳಿದರೋ ಗೊತ್ತಿಲ್ಲ. ಮಹಿಳೆ ನಾನು ಅಬಲೆ ಅಲ್ಲ ಸಬಲೆ ಎನ್ನುತ್ತೀವಿ. ನನ್ನನ್ನು ಮಾತ್ರವಲ್ಲ ಸಮಾಜವನ್ನು ರಕ್ಷಣೆ ಮಾಡುತ್ತೇನೆ ಅನ್ನೋದನ್ನು ಮಹಿಳೆಯರು ತೋರಿಸಿದ್ದಾರೆ‌. ವಿದೇಶದಿಂದ ಬರುವ ಶತ್ರುಗಳನ್ನು ಎದುರಿಸಲು ಸೈನಿಕರಿದ್ದಾರೆ. ನಮಗೆ ಸವಾಲಾಗಿರುವುದು 125 ಕೋಟಿಯ ಈ ದೇಶದ ಆಂತರಿಕ ರಕ್ಷಣೆಯ ಸವಾಲು..

ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿಕೆ
ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿಕೆ
author img

By

Published : Sep 28, 2021, 4:26 PM IST

ಮೈಸೂರು : ಅಪರಾಧಿಗಳಿಗೆ, ದರೋಡೆಕೋರರಿಗೆ, ಕ್ರಿಮಿನಲ್‌ಗಳಿಗೆ ಪೊಲೀಸರು ಟೆರರ್ ಆಗಿರಬೇಕು ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರಿಗೆ ತಿವಿ ಮಾತು ಹೇಳಿದ ಗೃಹಮಂತ್ರಿ ಆರಗ ಜ್ಞಾನೇಂದ್ರ..

ಪೊಲೀಸ್‌ ತರಬೇತಿ ಶಾಲೆಯ ವತಿಯಿಂದ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ 6ನೇ ತಂಡದ 242 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳಲ್ಲಿ ಶೇ.35ರಷ್ಟು ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಗಳೇ ಆಗಿರ್ತವೆ.

ಮಹಿಳೆ ಎಲ್ಲವನ್ನು ಪುರುಷ ಅಧಿಕಾರಿ ಬಳಿ ಹೇಳಲು ಸಾಧ್ಯವಿಲ್ಲ. ಪೊಲೀಸರ ಬಗ್ಗೆ ಜನರಿಗೆ ಭಯ ಇರಬಾರದು. ಪೊಲೀಸ್ ಠಾಣೆಗೆ ಬರುವವರನ್ನು ಗೌರವಿಸಬೇಕು ಎಂದರು. ಪೊಲೀಸರಿಂದಲೂ ಅಪರಾಧಗಳು ನಡೆಯುತ್ತಿವೆ. ಪೊಲೀಸರ ಮೇಲೂ ದೂರು ನೀಡಲು ವ್ಯವಸ್ಥೆ ಮಾಡಲಾಗುವುದು.

ಈ ಬಗ್ಗೆ ಎಸ್ಪಿ, ಡಿಜೆ ಕಚೇರಿಗಳಲ್ಲಿ ದೂರು ನೀಡಲು ವ್ಯವಸ್ಥೆ ಮಾಡಲಾಗುವುದು. ಪೊಲೀಸರ ಕಡೆಯಿಂದ ಇತ್ತೀಚೆಗೆ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸರಿಂದ ಅಪರಾಧವಾದಾಗ ಜನ ಭಯವಿಲ್ಲದೇ ದೂರು ನೀಡಬೇಕು. ಇಂತಹ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮಹಿಳೆ ಅಬಲೆ ಅಂತಾ ಏಕೆ ಹೇಳಿದರೋ ಗೊತ್ತಿಲ್ಲ. ಮಹಿಳೆ ನಾನು ಅಬಲೆ ಅಲ್ಲ ಸಬಲೆ ಎನ್ನುತ್ತೀವಿ. ನನ್ನನ್ನು ಮಾತ್ರವಲ್ಲ ಸಮಾಜವನ್ನು ರಕ್ಷಣೆ ಮಾಡುತ್ತೇನೆ ಅನ್ನೋದನ್ನು ಮಹಿಳೆಯರು ತೋರಿಸಿದ್ದಾರೆ‌. ವಿದೇಶದಿಂದ ಬರುವ ಶತ್ರುಗಳನ್ನು ಎದುರಿಸಲು ಸೈನಿಕರಿದ್ದಾರೆ. ನಮಗೆ ಸವಾಲಾಗಿರುವುದು 125 ಕೋಟಿಯ ಈ ದೇಶದ ಆಂತರಿಕ ರಕ್ಷಣೆಯ ಸವಾಲು.

ಇದನ್ನು ಸೈನಿಕರು ಮಾಡಲು ಸಾಧ್ಯವಿಲ್ಲ, ಅದನ್ನು ಮಾಡುತ್ತಿರುವುದು ಪೊಲೀಸರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆಯಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಪೊಲೀಸ್​ ಹುದ್ದೆ ಅಂದರೆ ಪುರುಷರಿಗೆ ಎನ್ನುವ ಪರಿಕಲ್ಪನೆ ಇತ್ತು. ಆದರೀಗ ಕಾಲ ಬದಲಾಗಿದೆ. ನೂರಕ್ಕೆ 25 ಭಾಗ ಮಹಿಳೆಯರು ಇರಬೇಕು. ರಾಜ್ಯದಲ್ಲಿ ಶೇ.10ರಷ್ಟು ಮಹಿಳಾ ಕಾನ್ಸ್ ಸ್ಟೇಬಲ್ ಇದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.