ಮೈಸೂರು : ಕೋವಿಡ್ ಉಲ್ಬಣ ಹಿನ್ನೆಲೆ ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಸಾರ್ವಜನಿಕರು ಪುಣ್ಯಸ್ನಾನ ಮಾಡದಂತೆ ನಿರ್ಬಂಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ.
ಯುಗಾದಿ ಹಬ್ಬದಂದು ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆಯಾಗಿದೆ. ಆದರೆ, ಈ ಬಾರಿ ಕೊರೊನಾ ಸೋಂಕು ಹೆಚ್ಚಳವಾಗಿದ್ದರಿಂದ ಪುಣ್ಯಸ್ನಾನಕ್ಕೆ ಅವಕಾಶ ಇರುವುದಿಲ್ಲ.
ಸಾರ್ವಜನಿಕರು ಗುಂಪು ಸೇರದಂತೆ ತಡೆಯಲು ಮತ್ತು ನದಿ ಬಳಿಗೆ ಆಗಮಿಸದಂತೆ ಕ್ರಮವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ. ಸಾರ್ವಜನಿಕರು ಈ ಬಾರಿ ಮನೆಯಲ್ಲೇ ಯುಗಾದಿ ಹಬ್ಬ ಆಚರಣೆ ಮಾಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಓದಿ : ಎರಡನೇ ಬಾರಿಗೆ ಶಾಸಕ ಮಹೇಶ್ ಕುಮಟಳ್ಳಿ ತಗುಲಿದ ಕೊರೊನಾ
ತಾಲೂಕಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಹಬ್ಬ ಆಚರಣೆ, ಜಾತ್ರೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಹಶೀಲ್ದಾರ್ ಡಿ. ನಾಗೇಶ್ ಮತ್ತು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಮನವಿ ಮಾಡಿದ್ದಾರೆ.