ETV Bharat / state

ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಕಮಿಷನರ್ ಕಚೇರಿ ಉದ್ಘಾಟನೆಗೆ ದಿನ ನಿಗದಿ.!: ಆಕ್ಷೇಪ - city police commissioner Office inauguration by CM

ನಜರ್​ಬಾದ್​ನಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್​ ಕಮಿಷನರ್ ಕಚೇರಿ ಪಾರ್ಕ್ ಜಾಗದಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ನಿರ್ಮಾಣವಾಗಿದೆ ಎಂದು ಆರೋಪಿಸಿ, ನಜರ್​ಬಾದ್ ನಿವಾಸಿ ಅಶೋಕ್ ಕುಮಾರ್ ಎಂಬುವವರು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು.

High Court injunction
ನೂತನ ನಗರ ಪೋಲಿಸ್ ಕಮಿಷನರ್ ಕಚೇರಿಗೆ ಹೈ ಕೋರ್ಟ್ ನಿಂದ ತಡೆಯಾಜ್ಞೆ
author img

By

Published : Nov 21, 2020, 2:05 PM IST

Updated : Nov 21, 2020, 3:14 PM IST

ಮೈಸೂರು: ಪಾರ್ಕ್ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೇ ನಿರ್ಮಾಣವಾಗಿರುವ ನೂತನ ನಗರ ಪೊಲೀಸ್​ ಕಮಿಷನರ್ ಕಚೇರಿಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ಇದ್ದರೂ ಮಂಗಳವಾರ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು ಸರಿಯಲ್ಲ ಎಂದು ದೂರುದಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.

ನಗರದ ನಜರ್​ಬಾದ್​ನಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್​ ಕಮಿಷನರ್ ಕಚೇರಿ ಪಾರ್ಕ್ ಜಾಗದಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ, ನಜರ್ ಬಾದ್ ನಿವಾಸಿ ಅಶೋಕ್ ಕುಮಾರ್ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ತಡೆಯಾಜ್ಞೆಯನ್ನೂ ಲೆಕ್ಕಿಸದೆ ಪೊಲೀಸ್ ಕಮಿಷನರ್ ಕಚೇರಿ ನಿರ್ಮಾಣವಾಗಿದೆ. ಇದನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಉದ್ಘಾಟನೆ ಮಾಡಿಸಲು ಸಿದ್ದತೆ ಮಾಡಿಕೊಂಡಿಕೊಳ್ಳಲಾಗಿತ್ತು. ಆಗ ದೂರುದಾರ ಅಶೋಕ್ ಕುಮಾರ್ ಪ್ರತಿಕಾ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಕೋರ್ಟ್​ನ ತಡೆಯಾಜ್ಞೆಯ ಉಲ್ಲಂಘನೆ ಆಗುತ್ತದೆ ಎಂದು ಉದ್ಘಾಟನೆಗೆ ಬರಲಿಲ್ಲ.

ಆದರೆ, ಮಂಗಳವಾರ 24 ನೇ ತಾರೀಖು ಸಂಜೆ ಸಿಎಂ ಯಡಿಯೂರಪ್ಪ ಈ ಕಟ್ಟಡ ಉದ್ಘಾಟನೆ ಮಾಡುತ್ತಾರೆ ಎಂದು ದಿನಾಂಕ ನಿಗದಿ ಮಾಡಲಾಗಿದೆ. ತಡೆಯಾಜ್ಞೆ ಇದ್ದರೂ ಯಡಿಯೂರಪ್ಪ ಈ ನೂತನ ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆಗೆ ಬರುತ್ತಿರುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಶೋಕ್​ ಕುಮಾರ್​ ಹೇಳಿದ್ದಾರೆ.

Last Updated : Nov 21, 2020, 3:14 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.