ETV Bharat / state

ಮೈಸೂರಲ್ಲಿ ಕೋವಿಡ್​ ಆತಂಕ.. ಬಾವಲಿ ಚೆಕ್​ ಪೋಸ್ಟ್ ಪರಿಶೀಲಿಸಿದ ಆರೋಗ್ಯಾಧಿಕಾರಿ

ಕೇರಳ ಗಡಿಯ ಹೆಚ್​ಡಿ ಕೋಟೆ ತಾಲೂಕಿನ ಬಾವಲಿ ಚೆಕ್​ ಪೋಸ್ಟ್​ಗೆ ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Etv Bharathealth-officer-inspected-the-bavali-check-post-for-emerge-of-covid-variant
ಮೈಸೂರು: ಕೋವಿಡ್​ ಆತಂಕ; ಬಾವಲಿ ಚೆಕ್​ ಪೋಸ್ಟ್ ಪರಿಶೀಲಿಸಿದ ಆರೋಗ್ಯಾಧಿಕಾರಿ
author img

By ETV Bharat Karnataka Team

Published : Dec 19, 2023, 7:44 PM IST

ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಪ್ರತಿಕ್ರಿಯೆ

ಮೈಸೂರು: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣ ವರದಿಯಾದ ಹಿನ್ನೆಲೆ ಹೆಚ್​ಡಿ ಕೋಟೆ ತಾಲೂಕಿನ ಬಾವಲಿ ಚೆಕ್​ ಪೋಸ್ಟ್​ಗೆ ತಾಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್.ಟಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರೋಗ್ಯಾಧಿಕಾರಿ ಡಾ ರವಿಕುಮಾರ್​ ಮಾತನಾಡಿ, "ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೋವಿಡ್​ ಪ್ರಕರಣಗಳು ಕಂಡುಬಂದ ಹಿನ್ನೆಲೆ ಇಂದು ಹೆಚ್​ಡಿ ಕೋಟೆಯ ಬಾವಲಿ ಚೆಕ್​ ಪೋಸ್ಟ್​ಗೆ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ. ನಾಳೆಯಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಹಾಗೂ 2 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಸ್ಕ್ರೀನಿಂಗ್​ ಮಾಡಲು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಇಲ್ಲಿಂದ ಕೇರಳಕ್ಕೆ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರ ಮೇಲೆ ನಿಗಾ ವಹಿಸಿ, ಅವರಲ್ಲಿ ಯಾವುದೇ ಕೋವಿಡ್​ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ" ಎಂದರು.

"ಕೇರಳದ ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿನ ಜನರಿಗೆ ಕರಪತ್ರದ ಮೂಲಕ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದೇನೆ. ಅರಣ್ಯ ಮತ್ತು ಪೊಲೀಸ್​ ಇಲಾಖೆಯ ಸಿಬ್ಬಂದಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ಮೇಲಧಿಕಾರಿಗಳ ಸೂಚನೆಯಂತೆ ಕೆಲಸವನ್ನು ನಿರ್ವಹಿಸುತ್ತೇವೆ" ಎಂದು ತಿಳಿಸಿದರು.

ಜೆಎನ್.1 ತಳಿ ವೈರಸ್ ದುರ್ಬಲ - ಆಂಜಿನಪ್ಪ(ದೊಡ್ಡಬಳ್ಳಾಪುರ): ಮತ್ತೊಂದೆಡೆ, ಕೋವಿಡ್​ ರೂಪಾಂತರಿ ಜೆಎನ್.1 ವೈರಸ್ ದುರ್ಬಲವಾದದ್ದು, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ಆಂಜಿನಪ್ಪ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ರೂಪಾಂತರಿ ವೈರಸ್ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ. ಆದರೆ, 60 ವರ್ಷ ಮೇಲ್ಪಟ್ಟವರು ಮತ್ತು 3 ರಿಂದ 13 ವರ್ಷದ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹಿಂದಿನ ಅನುಭವದ ಪ್ರಕಾರ ಜನರು ಗುಂಪು ಗುಂಪಾಗಿ ಸೇರಬಾರದು. ಸರ್ಕಾರದ ಗೈಡ್​​ಲೈನ್​ ಪ್ರಕಾರ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು ಎಂದರು.

ಜೆಎನ್.1 ವೈರಸ್​​ನಿಂದ ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಬರುತ್ತೆ. ಐಸಿಯುನಲ್ಲಿ ಆಡ್ಮಿಟ್ ಆಗುವಷ್ಟು ಆತಂಕಕಾರಿಯಲ್ಲ. ಸದ್ಯ ಕರ್ನಾಟಕದಲ್ಲಿ 53 ಜನರಲ್ಲಿ 6 ಜನ ಐಸಿಯುನಲ್ಲಿದ್ದಾರೆ ಎಂಬ ಮಾಹಿತಿ ಇದೆ. 8 ಜನರು ವಾರ್ಡ್​ನಲ್ಲಿದ್ದಾರೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸ್ಪೆಷಲ್ ಟಾಸ್ಕ್​​ಪೋರ್ಸ್ ಜೊತೆ ಚರ್ಚೆ ನಡೆಸಿದ್ದಾರೆ. ಚಳಿಯಂತಹ ವಾತಾವರಣದಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಿರುತ್ತದೆ. ಆದರೆ, ಸಂಕ್ರಾಂತಿಯ ನಂತರ ವೈರಸ್ ತಾನಾಗಿಯೇ ಮಾಯವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ..ಭಯಬೇಡ ಎಂದ ಡಿಎಚ್​ಒ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.