ETV Bharat / state

ಸಾಲ ಮರುಪಾವತಿಗೆ ಒತ್ತಡ: ಫೈನಾನ್ಸ್​ ಕಂಪನಿ ವಿರುದ್ಧ ಮಹಿಳೆಯರ ಆಕ್ರೋಶ - ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಖಾಸಗಿ ಕಂಪನಿಯಿಂದ ಸಾಲ ಮರುಪಾವತಿಸುವಂತಡ ಕಿರುಕುಳ

ಸಾಲ ಮರುಪಾವತಿಗೆ ಪಟ್ಟು ಬಿದ್ದ ಖಾಸಗಿ ಫೈನಾನ್ಸ್​ ಕಂಪನಿ ವಿರುದ್ಧ ಮಹಿಳೆಯರ ಆಕ್ರೋಶ ಹೊರಹಾಕಿದ್ದಾರೆ. ಮೂರು ತಿಂಗಳು ಟೈಂ ಕೊಡಿ, ಇಲ್ಲವೆಂದರೆ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ಳುತ್ತೇವೆ ಎಂದು ಸಾಲ ಪಡೆದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

Harassment of repayment of loans from a micro finance private company in Mysore
ಸಾಲ ಮರುಪಾವತಿಗೆ ಪಟ್ಟು ಬಿದ್ದ ಖಾಸಗಿ ಫೈನಾನ್ಸ್​ ಕಂಪನಿ ವಿರುದ್ಧ ಮಹಿಳೆಯರ ಆಕ್ರೋಶ
author img

By

Published : May 3, 2021, 9:32 AM IST

ಮೈಸೂರು: ಸಾಲ ಮರುಪಾವತಿಗೆ ಮೈಕ್ರೋ ಫೈನಾನ್ಸ್ ಖಾಸಗಿ ಕಂಪನಿಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ಸಾಲ ಮರುಪಾವತಿಗೆ ಪಟ್ಟು ಬಿದ್ದ ಖಾಸಗಿ ಫೈನಾನ್ಸ್​ ಕಂಪನಿ ವಿರುದ್ಧ ಮಹಿಳೆಯರ ಆಕ್ರೋಶ

ಸಾಲ ಮರುಪಾವತಿಗೆ ನಮಗೆ ಮೂರು ತಿಂಗಳು ಟೈಂ ಕೊಡಬೇಕು. ಇಲ್ಲವೆಂದರೆ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ಳುತ್ತೇವೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ ಹಣ ಪಾವತಿಸುವಂತೆ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಿರುವ ಖಾಸಗಿ ಫೈನಾನ್ಸ್ ಸಿಬ್ಬಂದಿಗೆ, ಸಮಯಾವಕಾಶ ನೀಡುವಂತೆ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಮನವಿ ಮಾಡಿದ್ದಾರೆ. ಕೊರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ನಮ್ಮನ್ನು ಯಾರೂ ಕೂಲಿಗೆ ಕರೆಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ಸಹಿಸದೆ ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಲು ಸ್ತ್ರೀಶಕ್ತಿ ಸಂಘದ ಮಹಿಳೆಯರು ಮುಂದಾಗಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.