ಮೈಸೂರು: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದವರನ್ನು ನೆನಪು ಮಾಡಿಕೊಳ್ಳಬೇಕು ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಚಿವನಾಗುವ ಬಯಕೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನು ಸಚಿವ ಮಾಡಬೇಕು ಎಂಬ ಪರಮಾಧಿಕಾರ ಸಿಎಂಗಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದವರನ್ನು ನೆನಪು ಮಾಡಿಕೊಳ್ಳಬೇಕು. ನಾನು ಪದೇ ಪದೇ ಅವರನ್ನು ಭೇಟಿಯಾಗಿ ಕೇಳುವುದಿಲ್ಲ, ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮಾಡಲು ಅವರ ಮುಂದೆ ನಿಂತವರಿಗೆ ಸಹಾಯ ಮಾಡಬೇಕು ಎಂದರು.
ಸದ್ಯ ನಾನು ವಿಧಾನ ಪರಿಷತ್ ಸದಸ್ಯನಿದ್ದೇನೆ. 6 ವರ್ಷಗಳ ಕಾಲ ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕೆಲಸ ಮಾಡಿಕೊಂಡು ಹೋಗುತ್ತೀನಿ ಎಂದರು. ವಿಧಾನ ಪರಿಷತ್ ಸದನ ಸಮಿತಿಗೆ ರಾಜೀನಾಮೆ ವಿಚಾರವಾಗಿ ಮಾತನಾಡಿ, ಸದನದಲ್ಲಿ ಗಲಾಟೆ ವಿಚಾರವಾಗಿ ಸದನ ಸಮಿತಿ ಮಾಡಲಾಗಿತ್ತು. ರಾಜೀನಾಮೆ ನೀಡಲು ಬೇಕಾದಷ್ಟು ಕಾರಣಗಳಿವೆ ಎಂದರು.
ಇದನ್ನೂ ಓದಿ: ಸಚಿವ ಸ್ಥಾನ ಕೇಳಿಲ್ಲ, ನೀಡಿದರೆ ನಿಭಾಯಿಸುವೆ; ಶಾಸಕ ಬೆಲ್ಲದ