ETV Bharat / state

ಕುರುಬ ಸಮುದಾಯ ಎಸ್​ಟಿಗೆ ಸೇರ್ಪಡೆ ಹೋರಾಟ : ಸಿದ್ದರಾಮಯ್ಯ ಬೆಂಬಲವಿದೆ ಎಂದ 'ಹಳ್ಳಿ ಹಕ್ಕಿ'

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆಗಳು, ಪಕ್ಷಗಳ ಬೆಂಬಲ ಕೇಳಿದ್ದೇವೆ. ಇದರಲ್ಲಿ ಆರ್​ಎಸ್​ಎಸ್ ಸಹ ಇದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಹೋರಾಟಕ್ಕೆ ಬೆಂಬಲ‌ ಕೇಳುತ್ತೇವೆ..

ಎಂಎಲ್​ಸಿ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ
ಎಂಎಲ್​ಸಿ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ
author img

By

Published : Dec 27, 2020, 1:18 PM IST

ಮೈಸೂರು : ಕುರುಬ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನ ಆಹ್ವಾನಿಸಿದ್ದೇವೆ. ಅವರು ನಮ್ಮ ಜೊತೆ ಇರುತ್ತಾರೆ. ಈ ಹೋರಾಟಕ್ಕೆ ಅವರ ವಿರೋಧ ಇಲ್ಲವೆಂದು ಎಂಎಲ್​ಸಿ ಹೆಚ್ ವಿಶ್ವನಾಥ್ ಹೇಳಿದರು.

ಎಸ್‌ಟಿ ಹೋರಾಟಕ್ಕೆ ಸಂಬಂಧಿಸಿದಂತೆ ಎಂಎಲ್​ಸಿ ಹೆಚ್.ವಿಶ್ವನಾಥ್ ಮಾತನಾಡಿದರು..

ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ, ಹೆಚ್‌ ಎಂ ರೇವಣ್ಣ, ಕೆ ಎಸ್‌ ಈಶ್ವರಪ್ಪ, ಹೆಚ್‌ ವಿಶ್ವನಾಥ್ ಹಾಗೂ ಮುಂದಾದ ರಾಜಕೀಯ ನಾಯಕರ ವಿಚಾರದ ಪ್ರಶ್ನೆಯಲ್ಲ. ಹೊರತಾಗಿ ಇಡೀ ಕುರುಬ ಸಮುದಾಯದ ಪ್ರಶ್ನೆ.

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆಗಳು, ಪಕ್ಷಗಳ ಬೆಂಬಲ ಕೇಳಿದ್ದೇವೆ. ಇದರಲ್ಲಿ ಆರ್​ಎಸ್​ಎಸ್ ಸಹ ಇದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಹೋರಾಟಕ್ಕೆ ಬೆಂಬಲ‌ ಕೇಳುತ್ತೇವೆ ಎಂದರು.

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಹೋರಾಟದ ವಿಚಾರದಲ್ಲಿ ಆರ್​ಎಸ್​ಎಸ್ ಕುಮ್ಮಕ್ಕಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡದ ಅವರು, "ಆರ್​ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ?ಆರ್​ಎಸ್ಎಸ್ ಅಂದರೆ ಮೈಲಿಗೆ ಏಕೆ? ಆರ್​ಎಸ್ಎಸ್, ಯೂಥ್ ಕಾಂಗ್ರೆಸ್, ಯುವ ಜನತಾದಳದ ಯುವ ಮೋರ್ಚಾಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್​ಎಸ್ಎಸ್ ಬಗ್ಗೆ ಏಕೆ ಹೇಳಬೇಕು ಎಂದರು.

ಇನ್ನು, ಡಿ.29ರಂದು ಮೈಸೂರಿನಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿರೋದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.