ETV Bharat / state

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ: ಸ್ನಾನ ಘಟ್ಟದಲ್ಲಿ ಭಕ್ತರ ದಂಡು - ಮೈಸೂರು

ನಂಜನಗೂಡಿನ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ನೀರು ಹೆಚ್ಚಾಗಿದ್ದು, ಈ ಸ್ಥಳಕ್ಕೆ ಭಕ್ತಾದಿಗಳಿಗೆ, ಸ್ಥಳೀಯರಿಗೆ ಹಾಗೂ ಮುಡಿ ಸೇವೆಗೆ ದೇವಸ್ಥಾನ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.

Mysore
ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ಭಕ್ತರ ದಂಡು
author img

By

Published : Jul 24, 2021, 8:21 PM IST

ಮೈಸೂರು: ನಂಜನಗೂಡು ತಾಲೂಕಿನ ಕಪಿಲಾ ಸ್ನಾನ ಘಟ್ಟದಲ್ಲಿ ಭಕ್ತಾದಿಗಳು ನೀರಿಗೆ ಇಳಿಯಬಾರದು ಎಂದು ನಂಜುಂಡೇಶ್ವರ ದೇವಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಆದರೂ ಸ್ನಾನಘಟ್ಟದಲ್ಲಿ ಹೆಚ್ಚಿನ ಭಕ್ತರು ಸ್ನಾನ‌ ಮಾಡಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.

ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ಭಕ್ತರ ದಂಡು

ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ನಂಜನಗೂಡಿನ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ನೀರು ಹೆಚ್ಚಾಗಿದ್ದು, ಈ ಸ್ಥಳಕ್ಕೆ ಭಕ್ತಾದಿಗಳಿಗೆ, ಸ್ಥಳೀಯರಿಗೆ ಹಾಗೂ ಮುಡಿ ಸೇವೆಗೆ ದೇವಸ್ಥಾನ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.

ನಿರ್ಬಂಧ ಹೇರಿದರೂ ಕೂಡ ಭಕ್ತಾದಿಗಳು ಹಾಗು ಸ್ಥಳೀಯರು ಸ್ನಾನಘಟ್ಟದಿಂದ 3 ಕಿ.ಮಿ.ದೂರದಲ್ಲಿರುವ ಹೆಜ್ಜಿಗೆ ಗ್ರಾಮದ ಸಮೀಪ ಹರಿಯುವ ಕಪಿಲಾ‌ ನದಿಯಲ್ಲಿ ಸ್ನಾನ‌ ಮಾಡಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಜು‌‌‌‌ಲೈ 24ರಿಂದ ನಂಜುಂಡೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಡಿ ಸೇವೆ ಸ್ಥಗಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.