ETV Bharat / state

ಗ್ರಾಮ ಪಂಚಾಯಿತಿ ಚುನಾವಣೆ: ಮೈಸೂರಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ - vote counting

ಜಿಲ್ಲೆಯ ತಾಲೂಕು ಕೇಂದ್ರಗಳು ಹಾಗೂ ಮೈಸೂರು ನಗರದ ಒಂದು ಕೇಂದ್ರ ಸೇರಿದಂತೆ ಒಟ್ಟು 8 ಕೇಂದ್ರಗಳಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

vote counting
ಮತ ಎಣಿಕೆಗೆ ಸಕಲ ಸಿದ್ಧತೆ
author img

By

Published : Dec 29, 2020, 3:19 PM IST

ಮೈಸೂರು: ಜಿಲ್ಲೆಯ 8 ಕೇಂದ್ರಗಳಲ್ಲಿ ನಾಳೆ ನಡೆಯುವ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮೈಸೂರು ಜಿಲ್ಲೆಯ 250 ಗ್ರಾಮ ಪಂಚಾಯತಿಗಳ ಚುನಾವಣೆಗೆ ಡಿ. 22 ಹಾಗೂ 27ರಂದು ನಡೆದ ಎರಡು ಹಂತದ ಮತದಾನದಲ್ಲಿ ಕ್ರಮವಾಗಿ ಶೇ. 85.50 ಹಾಗೂ 81.17ರಷ್ಟು ಮತದಾನವಾಗಿದೆ. ಇದರ ಮತ ಎಣಿಕೆ ಡಿ. 30ರಂದು ಜಿಲ್ಲೆಯ ತಾಲೂಕು ಕೇಂದ್ರಗಳು ಹಾಗೂ ಮೈಸೂರು ನಗರದ ಒಂದು ಕೇಂದ್ರ ಸೇರಿದಂತೆ ಒಟ್ಟು 8 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ.

ಕೋವಿಡ್​ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮೆರವಣಿಗೆಯ ಮೂಲಕ ವಿಜಯೋತ್ಸವ ಆಚರಣೆಗೆ ಕಡಿವಾಣ ಹಾಕಲಾಗಿದೆ. ಒಟ್ಟು 8 ಕೇಂದ್ರಗಳಲ್ಲಿ 191 ಮತ ಎಣಿಕೆ ಕೊಠಡಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 1,764 ಮತ ಎಣಿಕೆ ಅಧಿಕಾರಿಗಳು, 534 ಮತ ಎಣಿಕೆ ಟೇಬಲ್​ಗಳನ್ನು ಬಳಸಲಾಗುತ್ತಿದೆ.

ಮತ ಎಣಿಕೆ ಕೇಂದ್ರಗಳ ವಿವರ: ಮೈಸೂರು ನಗರದ ಪಡುವರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜು, ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆ, ಹುಣಸೂರಿನ ಸಂತ ಜೋಸಫ್ ವಿದ್ಯಾ ಸಂಸ್ಥೆ, ಕೆ.ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್, ಹೆಚ್​.ಡಿ.ಕೋಟೆಯ ಸೇಂಟ್ ಮೇರಿಸ್ ಶಾಲೆ ಮತ್ತು ಸರಗೂರು ತಾಲೂಕಿನ ಗ್ರಾಮ ಪಂಚಾಯತಿ ಕ್ಷೇತ್ರಗಳ ಮತ ಎಣಿಕೆ ಹೆಚ್​.ಡಿ.ಕೋಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.