ETV Bharat / state

ದೇವಾಲಯ ನೆಲಸಮಗೊಳಿಸಿದ ಹಿನ್ನೆಲೆ: ನಂಜನಗೂಡು ತಹಶೀಲ್ದಾರ್ ಎತ್ತಂಗಡಿ

author img

By

Published : Sep 27, 2021, 8:15 PM IST

ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯವನ್ನು ಸೆ.10ರ ಮುಂಜಾನೆ ತೆರವು ಮಾಡಲಾಗಿತ್ತು. ಈ ಘಟನೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಇದಕ್ಕೆ ಅಸಮಾಧಾನ ಹೊರ ಹಾಕಿದ್ದರು..

Govt transfers tahsildar Mohan kumari
ನಂಜನಗೂಡು ತಹಶೀಲ್ದಾರ್ ಎತ್ತಂಗಡಿ

ಮೈಸೂರು : ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನ ನೆಲಸಮಗೊಳಿಸಿದ ವಿಚಾರವಾಗಿ ತಹಶೀಲ್ದಾರ್ ಮೋಹನ್ ಕುಮಾರಿ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ಐಎಂಎ ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದು, ನಂಜನಗೂಡು ತಹಶೀಲ್ದಾರ್​ ಹುದ್ದೆಗೆ ಸೂಕ್ತ ಪ್ರಭಾರ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

order copy
ಆದೇಶದ ಪ್ರತಿ

ಏನಿದು ಘಟನೆ?: ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯವನ್ನು ಸೆ.10ರ ಮುಂಜಾನೆ ತೆರವು ಮಾಡಲಾಗಿತ್ತು. ಈ ಘಟನೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಇದಕ್ಕೆ ಅಸಮಾಧಾನ ಹೊರ ಹಾಕಿದ್ದರು.

ಇದನ್ನೂ ಓದಿ: ದೇವಾಲಯಗಳ ತೆರವು ಕಾರ್ಯಕ್ಕೆ ಸರ್ಕಾರದಿಂದ ತಾತ್ಕಾಲಿಕ ಬ್ರೇಕ್‌: ಮೈಸೂರು ಡಿಸಿ, ತಹಶೀಲ್ದಾರ್‌ಗೆ ನೋಟಿಸ್

ಅಲ್ಲದೆ ತಹಶೀಲ್ದಾರ್ ವರ್ಗಾವಣೆ ಮಾಡುವಂತೆ ಅನೇಕ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿದ್ದವು‌‌. ಮೈಸೂರಿನಿಂದ ಸಿಎಂ ಮನೆವರೆಗೆ ಪಾದಯಾತ್ರೆ ನಡೆಸಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಜಗದೀಶ್ ಕಾರಂತ್ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ದೇಗುಲ ಕೆಡವಿದ ವಿಚಾರ.. ವಿವಿಧ ಪಕ್ಷಗಳ ನಾಯಕರ ಪ್ರತಿಕ್ರಿಯೆ ಹೀಗಿವೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.