ETV Bharat / state

ಶಿಲ್ಪಾನಾಗ್ ಅವರಿಂದ ರಾಜೀನಾಮೆ ಪತ್ರ ಬಂದಿಲ್ಲ : ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ - Government Chief Secretary ravi kumar

ಇಂದು ನಗರಕ್ಕೆ ಆಗಮಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಘಟನೆ ಬಗ್ಗೆ ಮಾಹಿತಿ ನೀಡಿದರು..

government-chief-secretary-ravi-kumar
ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್
author img

By

Published : Jun 4, 2021, 3:30 PM IST

ಮೈಸೂರು : ನನಗೆ ಶಿಲ್ಪಾನಾಗ್ ಅವರಿಂದ ರಾಜೀನಾಮೆ ಪತ್ರ ಬಂದಿಲ್ಲ. ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸಭೆ ಮಾಡಲು ಬಂದಿದ್ದೇನೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು

ಇಂದು ನಗರಕ್ಕೆ ಆಗಮಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಘಟನೆ ಬಗ್ಗೆ ಮಾಹಿತಿ ನೀಡಿದರು.

ನಂತರ ಮುಖ್ಯ ಕಾರ್ಯದರ್ಶಿ ಸಭೆ ನಡೆಸಲು ಹೊರ ಬಂದಾಗ ಮಾಧ್ಯಮದವರು ಘಟನೆ ಕುರಿತು ಪ್ರಶ್ನಿಸಿದರು. ನಂತರ ಇದಕ್ಕೆ ಪ್ರತಿಕ್ರಿಯಿಸಿದ ಅವರು, ಶಿಲ್ಪಾನಾಗ್ ಅವರ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ, ನನಗೆ ರಾಜೀನಾಮೆ ಪತ್ರ ಬಂದಿಲ್ಲ, ನಾನು ಕೋವಿಡ್ ನಿಯಂತ್ರಣಕ್ಕೆ ಮಾತ್ರ ಬಂದಿದ್ದೇನೆ ಎಂದು ಹೇಳಿದರು‌.

ಓದಿ: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಆರೋಪಕ್ಕೆ ಡಿಸಿ ಸಿಂಧೂರಿ ಸ್ಪಷ್ಟನೆ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.