ETV Bharat / state

ದಸರಾ ಮಹೋತ್ಸವ: ಗಜಪಡೆಗೆ 30 ಲಕ್ಷ ರೂ.ವಿಮೆ ಘೋಷಣೆ

author img

By

Published : Sep 15, 2021, 10:31 AM IST

ಸೆಪ್ಟೆಂಬರ್ 13ರಿಂದ ಗಜಪಯಣದ ಮೂಲಕ ಆಗಮಿಸಿರುವ ಆನೆಗಳಿಗೆ ಅಕ್ಟೋಬರ್ 24 ರವರೆಗೆ ಚಾಲ್ತಿಯಲ್ಲಿರುವಂತೆ 30 ಲಕ್ಷ ವಿಮೆಯನ್ನು ಮಾಡಿಸಲಾಗಿದೆ. ಗಂಡಾನೆಗಳಿಗೆ 3.50 ಲಕ್ಷ, ಹೆಣ್ಣಾನೆಗೆ 2.50 ಲಕ್ಷ ವಿಮೆ ಘೋಷಣೆ ಮಾಡಲಾಗಿದೆ

elephants
ಗಜಪಡೆ

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ತಂಡಕ್ಕೆ ಸರ್ಕಾರ 30 ಲಕ್ಷ ರೂ.ಗಳ ವಿಮೆ ಘೋಷಣೆ ಮಾಡಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ. ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ 8 ಆನೆಗಳಿಗೆ, ಮಾವುತರು, ಕಾವಾಡಿಗಳು ಸೇರಿ ಸಾರ್ವಜನಿಕ ಆಸ್ತಿ ಹಾನಿಯಾದರೆ ನಷ್ಟ ಭರಿಸಲು ಈ ರೀತಿಯಲ್ಲಿ ವಿಮೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.

ಗಂಡಾನೆಗಳಾದ ಅಭಿಮನ್ಯು, ವಿಕ್ರಮ, ಧನಂಜಯ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ, ಹೆಣ್ಣಾನೆಗಳಾದ ಕಾವೇರಿ, ಚೈತ್ರಾ ಹಾಗೂ ಲಕ್ಷ್ಮಿಗೆ ವಿಮೆ ಮಾಡಿಲಾಗಿದೆ. ಇನ್ನು ಆನೆಗಳ ಜೊತೆ ಬಂದ 16 ಮಂದಿ ಮಾವುತರು ಹಾಗೂ ಕಾವಾಡಿಗಳಿಗೆ 1 ಲಕ್ಷ ರೂ ಮೌಲ್ಯದ ವಿಮೆ ಜೊತೆಗೆ ಆನೆಗಳಿಂದ ಸಾರ್ವಜನಿಕ ಆಸ್ತಿ ಹಾನಿಯಾದರೆ ನಷ್ಟ ಭರಿಸಲು 30 ಲಕ್ಷ ರೂ. ಮೌಲ್ಯದ ಮೂರನೇ ವ್ಯಕ್ತಿ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

ನಾಳೆ ಅರಮನೆ ಪ್ರವೇಶ ಮಾಡಲಿರುವ ಗಜಪಡೆ: ನಾಳೆ ಬೆಳಗ್ಗೆ ಶುಭ ಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ 8 ಗಜಪಡೆ ಅರಮನೆ ಅಂಗಳವನ್ನು ಪ್ರವೇಶ ಮಾಡಲಿದೆ. ಅಲ್ಲಿ ಒಂದೆರಡು ದಿನ ವಿಶ್ರಾಂತಿ ಪಡೆದು ಸೆಪ್ಟೆಂಬರ್ 19 ರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಗಜಪಡೆಗೆ ವಿಶೇಷ ಆಹಾರ ನೀಡಲು ಟೆಂಡರ್ ಕರೆಯಲಾಗಿದ್ದು, ಅರಮನೆ ಆವರಣದಲ್ಲಿ ಆನೆಗಳಿಗೆ, ಮಾವುತರಿಗೆ ಹಾಗೂ ಕಾವಾಡಿಗಳಿಗೆ ಶೆಡ್ ನಿರ್ಮಿಸಲಾಗಿದೆ. ಜೊತೆಗೆ 8 ಆನೆಗಳು ಇರುವ ಕಡೆ ಸಿಸಿಟಿವಿ ಕ್ಯಾಮರಾ ಸಹ ಅಳವಡಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.