ಮೈಸೂರು : ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪೈಲ್ವಾನರಂತೆ ಅಖಾಡಕ್ಕಿಳಿದ ಎರಡು ಗೋರಿಲ್ಲಾಗಳು ಪ್ರವಾಸಿಗರಿಗೆ ಮುದ ನೀಡಿವೆ.
ಜರ್ಮನಿಯ ಆಲ್ ವೆಟರ್ ಮೃಗಾಲಯದಿಂದ ಮೈಸೂರಿನ ಮೃಗಾಲಯಕ್ಕೆ ಬಂದಿರುವ ತಾಬೊ ಮತ್ತು ಡೆಂಬ ಎಂಬ ಗೊರಿಲ್ಲಾಗಳು ಅಣ್ಣ-ತಮ್ಮಂದಿರು. ಅವು ಮೃಗಾಲಯದಲ್ಲಿ ಮನುಷ್ಯರಂತೆ ಕುಸ್ತಿ ಮಾಡಿ ಗಮನ ಸೆಳೆದಿವೆ.
ಒಂದಕ್ಕೊಂದು ಗುದ್ಡಾಟ ಮಾಡಿ ಮುನಿಸಿಕೊಂಡು ನಂತರ ಎರಡು ಒಂದಾಗಿವೆ. ಎರಡು ಗೋರಿಲ್ಲಾಗಳು ಮೃಗಾಲಯದ ವಾತಾವರಣಕ್ಕೆ ಹೊಂದಿಕೊಂಡಿವೆ.
ಓದಿ: ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯಿಂದ ಸಾಧಕರಿಗೆ ಜೀವಮಾನ ಪುರಸ್ಕಾರ ಪ್ರದಾನ..