ಮೈಸೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ರಸ್ತೆ ಬದಿಯ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿ ಮತ್ತು ಮಾಸ್ಕ್ ಗಳನ್ನು ವಿತರಿಸಿದರು.
ಇಂದು ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಗೋಲ್ಡನ್ ಸ್ಟಾರ್ ಗಣೇಶ್ ಆರ್ಮಿ ಸಂಘದ ಅವರ ಅಭಿಮಾನಿಗಳು ನಗರದ ಚಿಕ್ಕಗಡಿಯಾರದ ಮುಂಭಾಗದಲ್ಲಿನ ವ್ಯಾಪಾರಿಗಳಿಗೆ ಉಚಿತ ಛತ್ರಿ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.
ಇದೇ ವೇಳೆ ಕೊರೊನಾ ಕುರಿತಂತೆ ಅರಿವು ಮೂಡಿಸಿದರರು. ಈ ವೇಳೆ ಸಂಘದ ಅಧ್ಯಕ್ಷ ಪ್ರಣವ್ ಸೇರಿದಂತೆ ಇತರೆ ಸದಸ್ಯರು ಇದ್ದರು.