ETV Bharat / state

ಐಸಿಸ್ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ಕೊಡಿ.. ಮಹಮದ್ ಹ್ಯಾರಿಸ್ ನಲಪಾಡ್

author img

By

Published : Sep 21, 2022, 5:26 PM IST

ಐಸಿಸ್ ಸಂಪರ್ಕದಲ್ಲಿರುವವರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.

give-death-penalty-to-persons-connected-with-isis
ಐಸಿಸ್ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ಕೊಡಿ : ಮಹಮದ್ ಹ್ಯಾರಿಸ್ ನಲಪಾಡ್

ಮೈಸೂರು : ಐಸಿಸ್ ಸಂಪರ್ಕದಲ್ಲಿರುವವರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.

ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಐಸಿಸ್ ಸಂಪರ್ಕದಲ್ಲಿರುವ ಯುವಕರ ಬಗ್ಗೆ ಮಾತನಾಡಿ, ಇಂದು ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಆದ್ದರಿಂದ ಅವರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಯುವಕರು ನಿರುದ್ಯೋಗದಿಂದ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಇದಕ್ಕೆ ಬಿಜೆಪಿಯವರೇ ನೇರ ಹೊಣೆ ಎಂದು ಆರೋಪಿಸಿದರು.

ಐಸಿಸ್​ ಸಂಪರ್ಕದಲ್ಲಿರುವವರಿಗೆ ಗಲ್ಲು ಶಿಕ್ಷೆ ನೀಡಿ : ಕೆಲಸ ಇದ್ದರೆ ಯುವಕರು ತಪ್ಪು ಆಲೋಚನೆ, ತಪ್ಪು ದಾರಿ ತುಳಿಯುವುದಿಲ್ಲ. 2023ರ ವರೆಗೆ ಯುವಕರು ಕಾಯಿರಿ, ಒಳ್ಳೆಯ ದಿನ ಬರುತ್ತದೆ. ಯಾರು ತಪ್ಪು ದಾರಿಗೆ ಹೋಗಬೇಡಿ ಹಾಗೂ ಐಸಿಸ್ ಸಂಪರ್ಕದಲ್ಲಿರುವ ಯಾರೇ ಆಗಲಿ ಭಾರತದಲ್ಲಿ ಇಟ್ಟುಕೊಳ್ಳಬೇಡಿ ಅವರಿಗೆ ಗಲ್ಲು ಶಿಕ್ಷೆ ನೀಡಿ ಎಂದು ಹೇಳಿದರು.

ವೈಜ್ಞಾನಿಕ ವರದಿ ತಯಾರು ಮಾಡದೆ ಒತ್ತುವರಿ ತೆರವು : ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ ವಿರೋಧವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ನಲಪಾಡ್, ಕಾಂಗ್ರೆಸ್ ಗೂ ಒತ್ತುವರಿಗೂ ಸಂಬಂಧವಿಲ್ಲ. ಬಿಜೆಪಿ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಿ, ಒತ್ತುವರಿ ತೆರವು ಮಾಡುವ ಮುನ್ನ ವೈಜ್ಞಾನಿಕವಾಗಿ ವರದಿ ತಯಾರು ಮಾಡಿಕೊಳ್ಳಿ. ಆದರೆ ಪ್ರವಾಹ ಬಂದಿದೆ ಎಂದ ತಕ್ಷಣ ಆ ಕಟ್ಟಡ ಒಡೆಯಿರಿ, ಈ ಕಟ್ಟಡ ಒಡೆಯಿರಿ ಎಂದು ಎಲ್ಲಾ ಕಟ್ಟಡವನ್ನು ಒಡೆದರೇ ಹೇಗೆ. ವೈಜ್ಞಾನಿಕವಾಗಿ ವರದಿ ತಯಾರು ಮಾಡದೆ ಕಟ್ಟಡ ಒಡೆದರೇ ಹೇಗೆ ಎಂದು ಪ್ರಶ್ನೆ ಮಾಡಿದರು.

ನಾವೇ ಎಲ್ಲವನ್ನು ಬಗೆಹರಿಸುತ್ತೇವೆ : ಭಾರತ್ ಜೋಡೋ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಲಪಾಡ್, ಮನೆಯೆಂದರೆ ಒಂದು ಮಾತು ಬರುತ್ತದೆ ಒಂದು ಮಾತು ಹೋಗುತ್ತದೆ. ನಾವೇ ಮನೆಯೊಳಗೆ ಕೂತು ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ. ಯಾತ್ರೆಯ ಸಂಘಟನೆ ವಿಚಾರದಲ್ಲಿ ಯಾರು ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಮತಾಂತರ ನಿಷೇಧ ಕಾಯ್ದೆಗೆ ವಿಧಾನಸಭೆ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.