ETV Bharat / state

ನಟ ಪ್ರಕಾಶ್ ರಾಜ್ ನಿರ್ದಿಗಂತ ಸಂಸ್ಥೆಯಿಂದ 'ಗಾಯಗಳು' ನಾಟಕ ಪ್ರದರ್ಶನ..

ಜುಲೈ 29 ರಂದು ಮೈಸೂರಿನ ನಟ ಮಂಡ್ಯ ರಮೇಶ್​ ನಟನಾ ರಂಗಮಂದಿರದಲ್ಲಿ ಹಾಗೂ ಆಗಸ್ಟ್ 1ರಂದು ಕಲಾಮಂದಿರದ ಪಕ್ಕದಲ್ಲಿರುವ ಕಿರು ರಂಗ ಮಂದಿರದಲ್ಲಿ 'ಗಾಯಗಳು' ಎನ್ನುವ ನಾಟಕ ಪ್ರದರ್ಶನ ನಡೆಯಲಿದೆ.

Gaayagalu
ನಟ ಪ್ರಕಾಶ್ ರಾಜ್ ನಿರ್ದಿಗಂತ ಸಂಸ್ಥೆಯಿಂದ 'ಗಾಯಗಳು' ನಾಟಕ ಪ್ರದರ್ಶನ..
author img

By

Published : Jul 28, 2023, 9:03 PM IST

ಮೈಸೂರು: ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ಸಂಸ್ಥೆಯಿಂದ ಪ್ರಸ್ತುತ ಘಟನೆಗಳ ಕುರಿತಾದ ನಿರ್ಮಾಣವಾಗಿರುವ 'ಗಾಯಗಳು' ಎಂಬ ನಾಟಕ ಜುಲೈ 29 ರಂದು ಮೈಸೂರಿನ ನಟ ಮಂಡ್ಯ ರಮೇಶ್​ ಅವರ ನಟನಾ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.

ಶ್ರೀರಂಗಪಟ್ಟಣದ ಹತ್ತಿರವಿರುವ ತಮ್ಮ ಫಾರಂ ಹೌಸ್ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ತಾವು ನಿರ್ಮಾಣ ಮಾಡಿರುವ ನಿರ್ದಿಗಂತ ಎಂಬ ನಟನಾ ಪ್ರಯೋಗ ಶಾಲೆಯಲ್ಲಿ ಬೇರೆ ಬೇರೆ ನಟನಾ ಶಾಲೆಗಳಿಂದ ಕಲಿತು ಬಂದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಶ್ರೀಪಾದ ಭಟ್ ಅವರ ನಿರ್ದೇಶನದ, 14ಕ್ಕೂ ಹೆಚ್ಚು ಪಾತ್ರಧಾರಿಗಳನ್ನು ಒಳಗೊಂಡ 'ಗಾಯಗಳು' ಎಂಬ ನಾಟಕವನ್ನು ಆಗಸ್ಟ್ 1 ರಂದು ಮೈಸೂರಿನ ಕಲಾ ಮಂದಿರದ ಕಿರು ರಂಗ ಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ'' ಎಂದರು.

ದೇಶದಲ್ಲಿ ಉಂಟಾಗಿರುವ ಕೋಮು ಗಲಭೆ ಕುರಿತ ಕಥಾ ಹಂದರ ಹೊಂದಿರುವ ನಾಟಕ: ಪ್ರಕಾಶ್ ರಾಜ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿರುವ 'ಗಾಯಗಳು' ನಾಟಕವು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾಗತಿಕ ಯುದ್ಧ, ಕೋಮು ಗಲಭೆ, ಮಹಿಳೆಯರು ಮೇಲಿನ ದೌರ್ಜನ್ಯ ಸೇರಿದಂತೆ ಪ್ರಮುಖವಾಗಿ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಕಲಹಗಳ ಬಗ್ಗೆ ಜನರು ಅರಿತಿದ್ದಾರೆ. ಕಲೆ ಒಂದು ಭಾಷೆ, ಈ ಭಾಷೆಯ ಮೂಲಕ ಅವುಗಳನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಹಲವು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲುವ 'ಗಾಯಗಳು' ನಾಟಕ: 'ಗಾಯಗಳು' ಎಂದರೆ ಯುದ್ಧ, ಗಲಾಟೆ, ಕೋಮು ಗಲಭೆ ಸೇರಿದಂತೆ ಹಲವು ರೀತಿಯ ನೋವಿನ ಪ್ರದರ್ಶನ ಇದಾಗಿದ್ದು, ನಮ್ಮ ಸಂಸ್ಥೆಯು ರಾಜ್ಯದ ನಾನಾ ಕಡೆಗಳಿಂದ ಬಂದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಂಸ್ಥೆಯಾಗಿದ್ದು, ಇದರಲ್ಲಿ ಮಣಿಪುರ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವಂತಹ ನಾಟಕ ಇದಾಗಿದೆ. ನೋವಾಗಿರುವ ಹೆಣ್ಣು ಮಗಳು ನಮ್ಮ ಮನೆಯವಳು ಎಂದುಕೊಳ್ಳಬೇಕು. ನಮ್ಮ ಬೆರಳಿಗೆ ಪೆಟ್ಟಾದರೆ ಅದು ನಮಗೆ ಗಾಯ, ಅದೇ ಏಕಲವ್ಯನ ಬೆರಳಿಗಾದರೆ ಅದು ಸಮಾಜಕ್ಕೆ ಆದ ಗಾಯ ಎಂದು ಪ್ರಕಾಶ್ ರಾಜ್ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಕಿರುಕುಳದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

''ಆಗಸ್ಟ್ 1 ರಂದು ಮೈಸೂರಿನ ಕಲಾಮಂದಿರದ ಪಕ್ಕದಲ್ಲಿರುವ ಕಿರು ರಂಗ ಮಂದಿರದಲ್ಲಿ ಗಾಯಗಳು ನಾಟಕ ಪ್ರದರ್ಶಿಸಲಾಗುವುದು. ನಂತರ ರಾಜ್ಯದ ಸುಮಾರು 60 ಕಡೆಗಳಲ್ಲಿ ಈ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ. ಇದಾದ ಬಳಿಕ ನಾಟಕಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನೋಡಿಕೊಂಡು ಇನ್ನಷ್ಟು ವಿಸ್ತರಣೆ ಮಾಡುವ ಯೋಜನೆ ಇದೆ'' ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.

ಇದನ್ನೂ ಓದಿ: ಭರ್ತಿಯಾದ ಹರಿಹರದ ದೇವರಬೆಳೆಕೆರೆ ಪಿಕಪ್ ಡ್ಯಾಂ: ಮನಮೋಹಕ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.