ಮೈಸೂರು : ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ನಿಧನಕ್ಕೆ ಶಾಸಕ ಜಿ ಟಿ ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್ ಉದ್ಧಟತನ: ಕನ್ನಡ ಧ್ವಜಸ್ತಂಭ ತೆರವಿಗೆ ಗಡುವು
ನನ್ನ ಸ್ನೇಹಿತರು ಹಾಗೂ ಸಹಕಾರಿಗಳಾದ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ಅಕಾಲಿಕ ಸಾವಿನ ಸುದ್ದಿ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಧರ್ಮೇಗೌಡರು ಇಂತಹ ಒಂದು ಕೆಟ್ಟ ನಿರ್ಧಾರದ ಬಗ್ಗೆ ಅಲೋಚಿಸಬಾರದಿತ್ತು.
ಅವರ ನಿಧನ ನನಗೆ ವೈಯುಕ್ತಿಕವಾಗಿ ತೀರಾ ಬೇಸರವನ್ನುಂಟು ಮಾಡಿದೆ. ಧರ್ಮೇಗೌಡರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಿ ಟಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.