ETV Bharat / state

ನಾನು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಜಿ.ಟಿ. ದೇವೇಗೌಡ ಸ್ಪಷ್ಟನೆ!

ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರೊಂದಿಗೆ ವಿಶ್ವಾಸದಿಂದ ಇದ್ದೇನೆ. ಆದ್ರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

g t devegowda
ಶಾಸಕ ಜಿ ಟಿ ದೇವೇಗೌಡ
author img

By

Published : Jun 24, 2021, 4:03 PM IST

ಮೈಸೂರು: ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರೊಂದಿಗೆ ವಿಶ್ವಾಸದಿಂದ ಇದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಶಾಸಕ ಜಿ ಟಿ ದೇವೇಗೌಡ

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಲಸಿಕಾ ಕೇಂದ್ರದಲ್ಲಿ ಕೋವಿಡ್​ ಲಸಿಕೆಯ ಎರಡನೇ ಡೋಸ್ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುತ್ತೇನೆ‌ ಅಂತ ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಕೂಡ ಜಿ.ಟಿ. ದೇವೆಗೌಡ ಕಾಂಗ್ರೆಸ್ ಸೆರುತ್ತಾನೆ ಅಂತ ಹೇಳಿಲ್ಲ. ಕೆ.ಎನ್. ರಾಜಣ್ಣ ನನ್ನ ಸ್ನೇಹಿತರು, ಎಲ್ಲರೊಂದಿಗೆ ಉತ್ತಮ ಒಡನಾಟ ಇರುವುದರಿಂದ ಅವರು ಪ್ರೀತಿಯಿಂದ ಕಾಂಗ್ರೆಸ್‌ಗೆ ಬರುತ್ತಾನೆ ಅಂತಾ ಹೇಳಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ರೇಸ್​ನಲ್ಲಿ ನೀವು ಇದ್ದೀರಾ? ಪ್ರಶ್ನೆಗೆ ಜಿ‌. ಪರಮೇಶ್ವರ್ ಹೇಳಿದ್ದೇನು..?

ನಾನು ಮತ್ತು ರಾಜಣ್ಣ ಮಾತನಾಡಿ ಮೂರು ತಿಂಗಳಾಯಿತು. ನಾನು ಬಿಜೆಪಿ, ಕಾಂಗ್ರೆಸ್, ಎಲ್ಲ ಪಕ್ಷದ ನಾಯಕರೊಂದಿಗೆ ವಿಶ್ವಾಸದಲ್ಲಿದ್ದೇನೆ. ಚುನಾವಣೆಗೆ ಇನ್ನೂ ಎರಡು ವರ್ಷ‌ ಇದೆ‌, ಮುಂದೆ ನೋಡೋಣ ಎಂದರು.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಸುದ್ದಿಗೆ ಪ್ರತಿಕ್ರಿಯಿಸಿ, ಮುಂದಿನ ಸಿಎಂ ಹೇಳಿಕೆ ವಿಚಾರ ಕಾಂಗ್ರೆಸ್‌‌ನವರಿಗೆ ಬಿಟ್ಟದ್ದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.