ETV Bharat / state

ಕೊಲೆಗಾರನ ಸಹೋದರನ ಮರ್ಡರ್​​: ಗೆಳೆಯನ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ಸ್ನೇಹಿತರು - Church grounds of Gayatripuram

ಕಳೆದ ಸೋಮವಾರ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ಕೊಲೆಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಯುವಕನ ಸ್ನೇಹಿತರು ಕೊಲೆ ಆರೋಪಿಯ ಸಹೋದರನನ್ನು ಕೊಂದಿರುವ ಘಟನೆ ನಡೆದಿದೆ.

friends killed accused's brother for killing their friend
ಕೊಲೆಗಾರನ ಸಹೋದರನನ್ನು ಕೊಂದು ಗೆಳೆಯನ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ಸ್ನೇಹಿತರು
author img

By

Published : May 8, 2020, 12:18 PM IST

ಮೈಸೂರು: ತಮ್ಮ ಗೆಳೆಯನ ಹತ್ಯೆಗೆ ಸ್ನೇಹಿತರೇ ಪ್ರತೀಕಾರ ತೆಗೆದುಕೊಂಡಿದ್ದು, ಕೊಲೆ ಮಾಡಿದ ಯುವಕನ ಸಹೋದರನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.

ನಗರದ ಗಾಯತ್ರಿಪುರಂನ ಚರ್ಚ್ ಮೈದಾನದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕ್ಯಾತಮಾರನಹಳ್ಳಿಯ ನಿವಾಸಿ ಅಭಿಷೇಕ್(22) ಮೃತ ಯುವಕ. ಈತನನ್ನು ಅದೇ ಬಡಾವಣೆಯ ನಿವಾಸಿಗಳಾದ ಮಹೇಂದ್ರ ಮತ್ತು ಇರ್ಫಾನ್ ಕೊಲೆ ಮಾಡಿದ್ದಾರೆ. ಕಳೆದ ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಎಂಬಾತನ ಕೊಲೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು, ಕೊಲೆ ಮಾಡಿದ ಕಿರಣ್ ಮತ್ತು ಮಧು ಎಂಬಾತನನ್ನು ಕಾರ್ಯಾಚರಣೆ ನಡೆಸಿ ಬುಧವಾರವಷ್ಟೇ ಬಂಧಿಸಿ ಜೈಲಿಗಟ್ಟಿದ್ದರು.

ಇನ್ನೂ ಈ ನಡುವೆ ಸ್ನೇಹಿತ ಸತೀಶ್‍ನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ ಮಹೇಂದ್ರ ಮತ್ತು ಇರ್ಫಾನ್, ಟಿ. ನರಸೀಪುರದಲ್ಲಿ ಇದ್ದ ಬಂಧಿತ ಕಿರಣ್‍ನ ಸಹೋದರ ಅಭಿಷೇಕ್‍ನನ್ನು ಮೈಸೂರಿಗೆ ಮಾತನಾಡಲು ಕರೆಯಿಸಿಕೊಂಡಿದ್ದಾರೆ. ಅಭಿಷೇಕ್ ಗಾಯತ್ರಿಪುರಂ ಮೈದಾನದ ಬಳಿ ರಾತ್ರಿ 8 ಗಂಟೆ ಸಮಯದಲ್ಲಿ ಬಂದಾಗ ದಾಳಿ ನಡೆಸಿದ ಮಹೇಂದ್ರ ಮತ್ತು ಇರ್ಫಾನ್, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ನಜರ್​ಬಾದ್ ಠಾಣೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.