ETV Bharat / state

'ಫ್ರೀ ಕಾಶ್ಮೀರ್'​ ಪೋಸ್ಟರ್​ ಪ್ರದರ್ಶಿಸಿದ ಪ್ರಕರಣ: ವಿಚಾರಣೆಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ

author img

By

Published : Jan 11, 2020, 9:29 PM IST

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿ ಆವರಣದಲ್ಲಿ ಜನವರಿ 8 ರಂದು ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​ 'ಫ್ರೀ ಕಾಶ್ಮೀರ್​' ಎಂಬ ಫಲಕವನ್ನು ಹಿಡಿದಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

mysore vv student nalini
ವಿದ್ಯಾರ್ಥಿನಿ ನಳಿನಿ

ಮೈಸೂರು: ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ್​' ಪೋಸ್ಟರ್​ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಬಾಲಕುಮಾರ್ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.

ವಿದ್ಯಾರ್ಥಿನಿ ನಳಿನಿ

ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಮೈಸೂರು ವಿವಿ ಆವರಣದಲ್ಲಿ ಜ.8 ರಂದು ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​ 'ಫ್ರೀ ಕಾಶ್ಮೀರ್​' ಎಂಬ ಫಲಕವನ್ನು ಹಿಡಿದಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇವರ ವಿರುದ್ಧ ಜ. 9ರಂದು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾದ ನಳಿನಿ ಬೆಳಗ್ಗೆ 11 ಗಂಟೆಯಿಂದ ಸಂಜೆವರೆಗೆ ಪೊಲೀಸ್ ಅಧಿಕಾರಿಗಳು ಕೇಳಿದ 150ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ವಿಚಾರಣೆ ಮುಗಿಸಿ ಠಾಣೆಯಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ನಳಿನಿ, ಈಗಾಗಲೇ ಈ ಪ್ರಕರಣದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದೇನೆ. ಅದೇ ವಿಚಾರವನ್ನು ಪೊಲೀಸರಿಗೂ ವಿವರಿಸಿದ್ದೇನೆ. ಅದನ್ನು ಬಿಟ್ಟರೆ ಬೇರೆ ಏನನ್ನು ಹೇಳಲು ಇಚ್ಚಿಸುವುದಿಲ್ಲ ಎಂದರು.

Intro:ಮೈಸೂರು: ಮೈಸೂರು ವಿವಿಯಲ್ಲಿ ಫ್ರಿ ಕಾಶ್ಮೀರ ಫ್ಲೆ ಕಾರ್ಡ್ ಪ್ರಕರಣದಲ್ಲಿ ೬ ಗಂಟೆ ಪೋಲಿಸ್ ವಿಚಾರಣೆ ಮುಗಿಸಿ ಬಂದ ನಳಿನಿ ಮಾಧ್ಯಮಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

Body:ನಗರದ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ವರೆಗೆ ಪೋಲಿಸ್ ಕೇಳಿದ ೧೫೦ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀ ಕಾಶ್ಮೀರ ನಾಮ ಫಲಕ ಪ್ರಕರಣದ ಆರೋಪಿ ನಳಿನಿ .ಬಿ, ವಿಚಾರಣೆ ಮುಗಿಸಿ ಠಾಣೆಯಿಂದ ಜೊರ ಬಂದು ಮಾಧ್ಯಮಗಳ ಜೊತೆ ಮಾತನಾಡುತ್ತ ಈಗಾಗಲೇ ಈ ಪ್ರಕರಣದ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಅದೆ ವಿಚಾರವನ್ನು ಪೋಲಿಸರಿಗು ವಿವರಿಸಿದ್ದೇನೆ ಅದನ್ನು ಬಿಟ್ಟರೆ ಬೇರೆ ಏನನ್ನು ಹೇಳಲು ಇಚ್ಛೆ ಪಡುವುದಿಲ್ಲ. ಪತ್ರಿಕಾ ಹೇಳಿಕೆಯಲ್ಲಿ ಏನು‌ ಹೇಳಿದ್ದೆನೊ ಅದೆ ಅಂತಿಮ ಎಲ್ಲಾ ಪ್ರಶ್ನೆಗಳಿಗು ೧ ದೇ ಉತ್ತರ ಕೊಟ್ಟು ತರಾತುರಿಯಲ್ಲಿ ಕಾರು ಹತ್ತಿ ಹೊರಟ ಯುವತಿ

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.