ಮೈಸೂರು: ಸೂಪರ್ ಮಾರ್ಕೆಟ್ ಅಂಗಡಿಗೆ ನಾಗಾಲ್ಯಾಂಡ್ ಯುವಕರನ್ನು ಒಳ ಪ್ರವೇಶ ಮಾಡಲು ಬಿಡದೇ ತಡೆ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ನೌಕರರನ್ನು ಬಂಧಿಸಲಾಗಿದೆ.

ಶನಿವಾರ ಸಂಜೆ ನಗರದ ಚಾಮುಂಡಿಪುರಂನಲ್ಲಿರುವ ಮೋರ್ ಸೂಪರ್ ಮಾರ್ಕೆಟ್ಗೆ ಆಹಾರ ಪದಾರ್ಥಗಳನ್ನು ಖರೀದಿಸಲು ಬಂದ ಇಬ್ಬರು ನಾಗಾಲ್ಯಾಂಡ್ ಯುವಕರನ್ನು ಈ ಔಟ್ಲೆಟ್ ನ ನೌಕರರಾದ ರೇವಣ್ಣ, ಮಂಜು , ನವೀನ್ ಹಾಗೂ ಅವಿನಾಶ್ ಎಂಬುವವರು ಈ ಯುವಕರನ್ನು ಸೂಪರ್ ಮಾರ್ಕೆಟ್ ಒಳಗಡೆ ಪ್ರವೇಶಸಿದಂತೆ ತಡೆದು, ಜನಾಂಗೀಯ ತಾರತಮ್ಯ ಮಾಡಿ ಕಳುಹಿಸಿದ್ದರು.
ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಔಟ್ಲೆಟ್ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ನಡೆದಿರುವುದು ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.