ಮೈಸೂರು: ವಿಜಯನಗರ ನಿವಾಸಿ ವೈದ್ಯೆಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೇ ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಸ್ ಆಗಿದ್ದ ಮತ್ತೆ ಮೂವರು ಪೊಲೀಸರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ.
ವಿಜಯನಗರ ಮೊದಲ ಹಂತದ ವೈದ್ಯೆಗೆ ಸೋಂಕು ದೃಢವಾಗಿದ್ದು, ನಾಲ್ಕು ವಸತಿ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಕರ್ತವ್ಯದ ನಿಮಿತ್ತ ಬೆಂಗಳೂರಿನ ಪಾದರಾಯನಪುರ ಬಂದೋಬಸ್ತ್ ಗಾಗಿ ತೆರಳಿದ್ದ ಮೈಸೂರಿನ ಕೆ ಎಸ್ ಆರ್ ಪಿಯ ಮೂವರು ಪೊಲೀಸರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಓದಿ:ಮೈಸೂರಿನಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ.. ಆಸ್ಪತ್ರೆ ಸೀಲ್ಡೌನ್
ವರ್ತಕನಿಗೂ ಸೋಂಕು: ಕೃಷ್ಣ ವಿಲಾಸ ರಸ್ತೆಯ ವರ್ತಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಮೈಸೂರಿನ ಕೃಷ್ಣವಿಲಾಸ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಸೋಂಕಿತರನ್ನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.