ಮೈಸೂರು: ಆನೆ ದಂತ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ.
ಕೇರಳದ ತ್ರಿವೆಂಡ್ರಮ್ನ ಪ್ರೆಸ್ಟಿನ್ ಸಿಲ್ವ, ಜಯಪ್ರಕಾಶ, ಮೈಸೂರಿನ ಉದಯಗಿರಿಯ ಮೋಹನ್, ರಮೇಶ್ ಬಂಧಿತರು. 25 ಕೆಜಿ ತೂಕವಿರುವ ಅಂದಾಜು 5 ಲಕ್ಷ ರೂ. ಮೌಲ್ಯದ 8 ದಂತಗಳನ್ನು ಮಾರಾಟ ಮಾಡಲು ಆರೋಪಿಗಳು ಮುಂದಾಗಿದ್ದರು.
ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬನ್ನಿ ಮಂಟಪದ ಬ್ರಿಡ್ಜ್ ಬಳಿ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ದಾಳಿ ನಡೆಸಿ, ಆನೆ ದಂತ ಹಾಗೂ ಸ್ಕೂಟರ್ ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ.