ಮೈಸೂರು : ಸಚಿವರುಗಳು, ಸಂಸದರು, ಶಾಸಕರುಗಳು ಸೇರಿ ಜನ ಪ್ರತಿನಿಧಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರೈತ ಮುಖಂಡರೇ ಹೇಳಿರುವ ಘಟನೆ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದ ವೇಳೆ ರೈತ ಮುಖಂಡರೆಲ್ಲ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಆದರೆ, ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜನಪ್ರತಿನಿಧಿಗಳಾಗಲಿ ಇಲ್ಲ ಅಧಿಕಾರಿಗಳಾಗಲಿ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಇದಕ್ಕೆ ಸಭೆಯಲ್ಲಿದ್ದ ರೈತ ಮುಖಂಡರು ಆಕ್ಷೇಪಿಸಿದರಲ್ಲದೇ, ನಮಗಷ್ಟೇ ಸಾಮಾಜಿಕ ಅಂತರ ಅಲ್ಲ, ನೀವೂ ಕೂಡ ಅದನ್ನ ಪಾಲಿಸಬೇಕು ಅಂತಾ ಕಿವಿಮಾತು ಹೇಳಿದರು.