ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ. ಅವರಿಗೆ ತತ್ವ ಸಿದ್ಧಾಂತಗಳಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಟೀಕಿಸಿದರು.
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತ್ಯತೀತ ಶಕ್ತಿ ಉಳಿಯಲಿ ಎಂಬ ಉದ್ದೇಶದಿಂದ ಅವರನ್ನು ಸಿಎಂ ಮಾಡಿದ್ದೆವು. ಆದರೆ ಅವರು ಕಾಂಗ್ರೆಸ್ ಪಕ್ಷ ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾದರು ಎಂದರು.
ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಲು ಹಾಗೂ ಕುಮಾರಸ್ವಾಮಿ ಅವರು ಸಿಎಂ ಕಾಂಗ್ರೆಸ್ ಸಹಾಯ ಮಾಡಿದೆ. ಆದರೆ ಅವಕಾಶವಾದಿ ರಾಜಕಾರಣದಿಂದ ಪಕ್ಷವನ್ನು ಅವರು ದೂರುತ್ತಿದ್ದಾರೆ. ನಮ್ಮ ಪಕ್ಷ ಎಲ್ಲವನ್ನು ಅವರಿಗೆ ಕೊಟ್ಟಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಚುನಾವಣೆಗೆ ಬಿಜೆಪಿ ಪಕ್ಷದವರು ಹಣ ಹಂಚಲು ರೆಡಿಯಾಗಿದ್ದಾರೆ. ಎಂಎಲ್ಸಿ ವಿಶ್ವನಾಥ್ ಅವರೇ ಕೆಲ ದಿನಗಳ ಹಿಂದೆ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಭಾರಿ ಮೊತ್ತದ ಹಣ ನೀಡಿತ್ತು ಎಂದು ಹೇಳಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಹಣಬಲದಿಂದಲ್ಲೆ ಗೆದ್ದಿದೆ ಎನಿಸುತ್ತದೆ ಎಂದರು.
ಓದಿ : 'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್ಡಿಕೆ ಹೀಗೆ ಹೇಳಿದ್ಯಾಕೆ?
ಶಾಸಕ ಮಂಜುನಾಥ್ ಮಾತನಾಡಿ, ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚವನ್ನು ಚುನಾವಣೆ ಆಯೋಗ ನಿಗದಿಗೊಳಿಸಬೇಕು.ಇದರಿಂದ ರಾಜ್ಯಾದ್ಯಂತ ನೂರಾರು ಕೋಟಿ ರೂಗಳ ಖರ್ಚಿಗೆ ತಡೆಯಾಗಲಿದೆ. ಅಭ್ಯರ್ಥಿಗಳ ಕುಟುಂಬದವರು ಉಳಿಯಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಇವಿಎಂ ಯಂತ್ರ ಇದ್ದಿದ್ದರೆ ಟಿಆರ್ಎಸ್ ಪಕ್ಷವನ್ನು ಹಿಂದಿಕ್ಕುತ್ತಿದ್ದರು ಎಂದು ವ್ಯಂಗ್ಯವಾಡಿದರು.