ಮೈಸೂರು: ಪತ್ರಿಕೆ ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಇಲ್ಲದಿದ್ದರೆ ಸರ್ವಾಧಿಕಾರಿ ಧರ್ಮವಾಗಿ ಬಿಡುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದ್ಯಾ, ಅಲ್ಲಿ ಪತ್ರಿಕೆಗಳಿಗೆ ಸ್ವಾತಂತ್ರ್ಯ ಕೊಟ್ಟಿಲ್ಲ. ನಮ್ಮ ದೇಶದಲ್ಲಿ ಪತ್ರಿಕಾ ಹಾಗೂ ಅಭಿವೃಕ್ತಿ ಸ್ವಾತಂತ್ರ್ಯ ಚೆನ್ನಾಗಿದೆ. ಆದರೂ ಕೆಲವು ಬಾರಿ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತೇವೆ. ಇದು ವಿಪರ್ಯಾಸ.
ಛಾಯಾಗ್ರಾಹಕರು ಹಲವು ಅಪಾಯದ ಸನ್ನಿವೇಶಗಳನ್ನ ಎದುರಿಸಿ ಕೆಲಸ ಮಾಡುತ್ತಾರೆ. ನಿಮ್ಮದು ಒಂದು ರೀತಿಯ ಸಾಹಸ ಪ್ರವೃತ್ತಿ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಅಂತಾರೆ. ರವಿ ಕಾಣದನ್ನ ಕವಿ ಕಂಡ, ಕವಿ ಕಾಣದನ್ನ ಛಾಯಾಗ್ರಾಹಕ ಕಂಡ ಅನ್ನೋ ಮಾತಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ಮಟ್ಟಿಗೆ ಛಾಯಾಗ್ರಾಹಕರ ವರ್ಚಸ್ಸು ಕಡಿಮೆಯಾಗಿದೆ. ನಾನು ಈಗಲೂ ಟಿವಿಗಿಂತ ಹೆಚ್ಚು ಪತ್ರಿಕೆ ಓದುತ್ತೇನೆ ಎಂದರು.