ಮೈಸೂರು: ಕಳೆದ ಆರು ತಿಂಗಳಿನಿಂದ ಅರಣ್ಯ ಇಲಾಖೆ ಸಂಬಳ ನೀಡಿಲ್ಲ, ಈ ಹಿನ್ನೆಲೆಯಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಎದುರಾಗಿರುವುದರಿಂದ, ನನಗೆ ದಯಮಾಡಿ ರಾಜ್ಯಪಾಲರು ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಅರಣ್ಯ ಇಲಾಖೆ ಗುತ್ತಿಗೆ ನೌಕರನೊಬ್ಬ ರಾಜ್ಯಪಾಲರಿಗೆ ಪತ್ರ ಬರೆದಿದ್ದಾನೆ.
ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಮುಂಭಾಗ ಗುತ್ತಿಗೆ ನೌಕರರ ಬೋರೇಗೌಡ, ತನ್ನ ಕುಟುಂಬ ಸಮೇತ ಪ್ರತಿಭಟನೆಗೆ ಕುಳಿತಿದ್ದಾನೆ. ನನಗೆ ನ್ಯಾಯ ಸಿಗದೇ ಹೋದರೆ ಕುಟುಂಬದವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ದಿನಗೂಲಿ ವಾಚರ್ ಆಗಿರುವ ಬೋರೇಗೌಡ, 2001- 2002 ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದೇನೆ. ಆದರೆ ಇದುವರೆಗೂ ಕಾಯಂ ಮಾಡಿಲ್ಲ. ಸರಿಯಾಗಿ ಸಂಬಳ ಕೂಡ ಸಿಗುತ್ತಿಲ್ಲ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳು ಸಂಬಳ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.