ETV Bharat / state

ಅಂಬಾವಿಲಾಸ ಫೋಟೋ ಹಾಕಿ ಟ್ವಿಟರ್​ನಲ್ಲಿ ಇದರ ಮಹತ್ವ ಸಾರುತ್ತಿರುವ ವಿದೇಶಿಗರು - mysore palace news

ಮೈಸೂರಿನ ಅಂಬಾವಿಲಾಸ ಅರಮನೆಯ ಫೋಟೋವನ್ನು ವಿದೇಶಿಗರು ಟ್ವಿಟರ್​ನಲ್ಲಿ ಹಾಕಿ, ಇದರ ಮಹತ್ವವನ್ನು ಸಾರುತ್ತಿದ್ದಾರೆ. ದೇಶದ ಅತಿ ದೊಡ್ಡ ಅರಮನೆ ಮೈಸೂರು ಅಂಬಾವಿಲಾಸ ಅರಮನೆ ಎಂದು ಭಾರತ ಮೂಲದ ನಿವಾಸಿಗಳು ಮತ್ತು ವಿದೇಶಿಗರು ಹೊಗಳಿದ್ದಾರೆ.

ಅಂಬಾವಿಲಾಸ
ಅಂಬಾವಿಲಾಸ
author img

By

Published : Dec 2, 2020, 4:03 PM IST

ಮೈಸೂರು: ವಿಶ್ವವಿಖ್ಯಾತಿ ಪಡೆದಿರುವ ಮೈಸೂರು ಅರಮನೆ ವಿದೇಶಿಗರ ಅಚ್ಚುಮೆಚ್ಚಿನ ಪ್ರವಾಸಿತಾಣವಾಗಿದ್ದು, ಟ್ವಿಟರ್​​​ನಲ್ಲಿ ಅಂಬಾವಿಲಾಸ ಫೋಟೋ ಹಾಕಿ ಮೈಸೂರು ಅರಮನೆಯ ಮಹತ್ವವನ್ನು ವಿದೇಶಿಗರು ಸಾರುತ್ತಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರನ್ನು, ವಿದೇಶಿಗರನ್ನು ಆಕರ್ಷಿಸುವುದು ಅಂಬಾವಿಲಾಸ ಅರಮನೆ. ಮೈಸೂರನ್ನು ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂದು ಕರೆಯುವ ಜೊತೆಗೆ ಅರಮನೆಗಳ ನಗರಿ ಎಂದೂ ಸಹ ಕರೆಯುತ್ತಾರೆ. ಅದರಂತೆ ಮೈಸೂರಿನ ಅಂಬಾವಿಲಾಸ ಅರಮನೆ ವೀಕ್ಷಿಸಲು ದೇಶ-ವಿದೇಶಗಳಿಂದ ವಿದೇಶಿಗರು, ಪ್ರವಾಸಿಗರು ಆಗಮಿಸುತ್ತಾರೆ.

ಅಂಬಾವಿಲಾಸ ಫೋಟೋ ಹಾಕಿ ಟ್ವಿಟ್ಟರ್​ನಲ್ಲಿ ಇದರ ಮಹತ್ವ ಸಾರುತ್ತಿರುವ ವಿದೇಶಿಗರು

ಟ್ವಿಟರ್​ನಲ್ಲಿ ಅರಮನೆ ಮಹತ್ವ ಸಾರುತ್ತಿರುವ ವಿದೇಶಿಗರು:

ಅರಮನೆಗೆ ಬಂದ ವಿದೇಶಿಗರು ಫೋಟೋ ತೆಗೆಸಿಕೊಂಡು ಖುಷಿ ಪಡುತ್ತಾರೆ. ಹಾಗೆಯೇ ಸ್ಪೇನ್​ನಲ್ಲಿನ ಭಾರತೀಯರ ಪ್ರವಾಸಿ ಕ್ಷೇತ್ರಗಳ ಗುರುತಿಸುವಿಕೆಯಲ್ಲಿ ಮೈಸೂರು ಅರಮನೆಯನ್ನು ವಿವರಿಸಿದ್ದಾರೆ. ಮೈಸೂರು ಅರಮನೆ '1912 ರಲ್ಲಿ ಸಂಪೂರ್ಣವಾಗಿ ಎದ್ದು ನಿಂತ ಬೆಳಗುವ ಜಗದೊಂದೇ ಅರಮನೆ' ಎಂದು ಮೈಸೂರು ಅರಮನೆಯನ್ನು ಬಣ್ಣನೆ ಮಾಡಿದ್ದು , ದೇಶದ ಅತಿ ದೊಡ್ಡ ಅರಮನೆ ಮೈಸೂರು ಅಂಬಾವಿಲಾಸ ಅರಮನೆ ಎಂದು ಭಾರತ ಮೂಲದ ನಿವಾಸಿಗಳು ಮತ್ತು ವಿದೇಶಿಗರು ಹೊಗಳಿದ್ದಾರೆ. ಇಂಡಿಯಾ ಇನ್ ಸ್ಪೇನ್ ಎಂಬ ಟ್ವಿಟರ್ ಖಾತೆಯಲ್ಲಿ ಅರಮನೆಯ ಫೋಟೋಗಳನ್ನು ಪೋಸ್ಟ್ ಮಾಡಿ, ಇತರ ಪ್ರವಾಸಿ ಪ್ರಿಯರಿಗೆ ಮೈಸೂರು ಅರಮನೆ ಮಹತ್ವ ಸಾರುತ್ತಿದ್ದಾರೆ. ಒಟ್ಟಾರೆ ವಿದೇಶಗಳಲ್ಲಿ ಮೈಸೂರಿನ ಅರಮನೆಯ ಫೋಟೋಗಳನ್ನು ಹಾಕಿ ನೆಚ್ಚಿನ ತಾಣ‌ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಇದನ್ನು ಓದಿ:ವಿನಯ್ ಕುಲಕರ್ಣಿಗೆ ರಾಜ್ಯಾತಿಥ್ಯ ಆರೋಪ.. ಹಿಂಡಲಗಾ ಜೈಲು ಅಧೀಕ್ಷಕರು ಹೀಗಂದರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.