ಮೈಸೂರು : ಕೋವಿಡ್ ಕಾರಣ ಕಳೆದ ಒಂದೂವರೆ ವರ್ಷದಿಂದ ಸಾಂಸ್ಕೃತಿಕ ನಗರಿಯಲ್ಲಿ ಆನ್ಲೈನ್ ಮೂಲಕ ವಿದೇಶಿಯರಿಗೆ ಯೋಗ ಹೇಳಿಕೊಡಲಾಗ್ತಿದೆ. ಮೈಸೂರಿನಲ್ಲಿ ಸುಮಾರು 150 ಕ್ಕೂ ಅಧಿಕ ಯೋಗ ಕೇಂದ್ರಗಳಿವೆ. ಪ್ರತಿ ವರ್ಷ 40 ರಿಂದ 50 ಸಾವಿರ ಜನರು ಯೋಗ ಕಲಿಯಲು ನಗರಕ್ಕೆ ಬರುತ್ತಾರೆ.
ಕೋವಿಡ್ ಆವರಿಸಲು ಶುರುವಾದ ಬಳಿಕ ಯಾರೂ ನೇರವಾಗಿ ಯೋಗ ಕಲಿಯಲು ಬರುತ್ತಿಲ್ಲ. ಹಾಗಾಗಿ, ಆನ್ಲೈನ್ ಮೂಲಕ ಯೋಗ ಕಲಿಸಲಾಗುತ್ತಿದೆ. ಕೋವಿಡ್ನಿಂದ ಬಾಡಿಗೆ ಕಟ್ಟಲು ಸಾಧ್ಯವಾಗದೆ ಹಲವಾರು ಯೋಗ ಕೇಂದ್ರಗಳು ಬಾಗಿಲು ಮುಚ್ಚಿವೆ ಎಂದು ಎಂದು ಯೋಗ ಶಿಕ್ಷಕ ಸುರೇಶ್ ಹೇಳಿದ್ದಾರೆ.
ಅಮೆರಿಕ , ಜಪಾನ್, ಜರ್ಮನಿ ಸೇರಿದಂತೆ ಹಲವು ದೇಶಗಳ ಜನರು ಆನ್ಲೈನ್ ಮೂಲಕ ಯೋಗ ಕಲಿಯುತ್ತಿದ್ದಾರೆ. ಮನೆಯಿಂದಲೇ ಯೋಗ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ. ವಿಶ್ವ ಯೋಗದಿನವಾದ ಇಂದು ಯೋಗ ತರಬೇತಿ ಪಡೆಯುತ್ತಿರುವ ವಿದೇಶಿಯರು ಯೋಗದ ಬಗ್ಗೆ ಮಾತನಾಡಿದ್ದಾರೆ.
ಓದಿ : ದೈಹಿಕ ಶಿಕ್ಷಕಿ ನೀಡಿದ ಪ್ರೋತ್ಸಾಹದ ಫಲ: ಉತ್ತಮ ಯೋಗಪಟುವಾಗಿ ರೂಪುಗೊಂಡ ಯುವತಿ