ಮೈಸೂರು: ನಂಜನಗೂಡು ತಾಲ್ಲೂಕಿನ ಕೊಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ 15ಕ್ಕೂ ಹೆಚ್ಚು ಎರಕೆ ಕಾಡು ಪ್ರದೇಶ ನಾಶವಾಗಿರುವ ಘಟನೆ ನಡೆದಿದೆ.
ಕೊಣನೂರು ಗ್ರಾಮದ ಕಾಡಂಚಿನ ಜಮೀನಿನ ಭಾಗದಲ್ಲಿ ಕಿಡಿಗೇಡಿಗಳು ಬೆಂಕಿಹಚ್ಚಿದ್ದರಿಂದ, ಬೆಟ್ಟದ ಮರ, ಗಿಡ, ಸಸಿಗಳು ಭಸ್ಮವಾಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ ಪಡುತ್ತಿದ್ದು, ಬೆಂಕಿ ಇನ್ನು ಹತೋಟಿಗೆ ಬಂದಿಲ್ಲ.
ಈ ಕಿರು ಅರಣ್ಯ ಪ್ರದೇಶದಲ್ಲಿ ಜಿಂಕೆಗಳು, ಮೊಲ, ಕರಡಿ ಚಿರತೆಗಳು ವಾಸಿಸುತ್ತೇವೆ. ಆದರೆ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾಡು ಪ್ರಾಣಿಗಳು ದಿಕ್ಕಪಾಲಾಗಿ ಓಡಿವೆ ಎನ್ನಲಾಗ್ತಿದೆ.
ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅರಣ್ಯ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.