ETV Bharat / state

ಕೇಕ್​ಗಳಲ್ಲೂ ಮುಂದುವರಿದ ಫಿಫಾ ವರ್ಲ್ಡ್​​ ಕಪ್​ ಉತ್ಸಾಹದ ಕೇಕೆ.. 560ಕೆಜಿ ಸಂಸತ್ ಕಟ್ಟಡ ನೋಡಲು ಮುಗಿಬಿದ್ದ ಜನ.. - ಡಾಲ್ಫಿನ್ ಬೇಕರ್ಸ್‌

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹಶೋಭೆ ಎಕ್ಸಿಬಿಷನ್‌ನಲ್ಲಿ ಡಾಲ್ಫಿನ್ ಬೇಕರ್ಸ್‌ನಿಂದ ತಯಾರಿಸಿದ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್‌ನ ಕೇಕ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.

FIFA World Cup fame in cakes
ಕೇಕ್​ಗಳಲ್ಲೂ ಫಿಫಾ ವಲ್ಡ್೯ ಕಪ್​ ಹವಾ
author img

By

Published : Dec 22, 2022, 1:24 PM IST

Updated : Dec 22, 2022, 3:35 PM IST

ಕೇಕ್​ಗಳಲ್ಲಿ ಫಿಫಾ ವಲ್ಡ್೯ ಕಪ್​ ಹವಾ

ಮೈಸೂರು: ಫಿಫಾ ವರ್ಲ್ಡ್​ ಕಪ್ ಮುಗಿದಿದ್ದರೂ ಅದರ ನೆನಪು ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಅದರಂತೆ ಕೇಕ್​ಗಳಲ್ಲಿಯೂ ಈಗ ಫಿಫಾ ವಲ್ಡ್೯ ಕಪ್​ ಹವಾ ಮುಂದುವರಿದಿದೆ.

ಡಾಲ್ಫಿನ್ ಬೇಕರ್ಸ್‌: ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆಯಲ್ಲಿ ಡಾಲ್ಫಿನ್ ಬೇಕರ್ಸ್‌ನಿಂದ ತಯಾರಿಸಿದ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್‌ನ ಕೇಕ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.

560 KG Parliament Building
560 ಕೆ ಜಿ ಸಂಸತ್ ಕಟ್ಟಡ

ಎಕ್ಸಿಬಿಷನ್‌: ಗೃಹಶೋಭೆ ಎಕ್ಸಿಬಿಷನ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಪೇಂಟಿಂಗ್​ಗಳು ಕಾರ್ಪೆಟ್, ಅಡುಗೆ ಮನೆ ವಸ್ತುಗಳು ಮಾತ್ರವಲ್ಲದೇ ಕೇಕ್‌ನಿಂದ ತಯಾರಾಗಿರುವ ನೂತನ ಸಂಸತ್ ಕಟ್ಟಡ, ರಾಷ್ಟ್ರೀಯ ಲಾಂಛನ ಹಾಗೂ ಫಿಫಾ ವಿಶ್ವಕಪ್​ನ ಪ್ರತಿಕೃತಿಗಳೂ ಇವೆ.

ಸಂಸತ್ ಕಟ್ಟಡ: ಫಾಂಡೆಂಟ್ ಐಸ್ ಕ್ರೀಂ, ಥರ್ಮೋಕೋಲ್ ಹಾಗೂ ಕೃತಕ ಆಹಾರ ಬಣ್ಣಗಳನ್ನು ಬಳಸಿ ತಯಾರಿಸಿರುವ ನೂತನ ಸಂಸತ್ ಕಟ್ಟಡ (ಸೆಂಟ್ರಲ್ ವಿಸ್ತ) ನೋಡಲು ಎಲ್ಲರೂ ಮುಗಿಬೀಳುತ್ತಿದ್ದಾರೆ. ಆರು ಮಂದಿ 35 ದಿನ ಕಾಲ ಸಮಯ ತೆಗೆದುಕೊಂಡು ಈ ಕೇಕ್ ತಯಾರಿ ಮಾಡಿದ್ದಾರೆ. ಈ ಕೇಕ್ ಹನ್ನೆರಡು ಅಡಿ ಎತ್ತರ ಹಾಗೂ ನಾಲ್ಕು ಅಡಿ ಅಗಲ ಇದೆ ಇದ್ದು, 560 ಕೆ.ಜಿ. ತೂಕ ಇದೆ.

ರಾಷ್ಟ್ರ ಲಾಂಛನ: ಇನ್ನು ನಮ್ಮ ರಾಷ್ಟ್ರ ಲಾಂಛನ 500 ಕೆ.ಜಿ. ತೂಕ ಇದ್ದು, 6 ಅಡಿ ಎತ್ತರ, 10 ಅಡಿ ಅಗಲ ಇದೆ. ಇದನ್ನು ಹೊರತುಪಡಿಸಿ ಟೈಟಾನಿಕ್, ಸ್ಪೋಟ್ಸರ್ ಕಾರ್, ಫಿಾ ವಲ್ಡರ್ ಕಪ್ ಮತ್ತು ಜರ್ಸಿ, ಕಾಡು, ಮರದಿಂದ ಮಾಡಿದ ಮನೆ, ವೆಡ್ಡಿಂಗ್ ಕೇಕ್‌ಗಳು ಸಹ ಇವೆ.

ಕೇಕ್‌ಗಳಿಗೆ ಬೇಡಿಕೆ: ಫಿಫಾ ವಲ್ಡ್೯ ಕಪ್ ಆರಂಭವಾದಾಗಿನಿಂದ ಈ ಪರಿಕಲ್ಪನೆಯ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಲವರು ಮೆಸ್ಸಿ ಹಾಗೂ ರೊನಾಲ್ಡೋ ಅವರ ರೀತಿಯ ಕೇಕ್‌ಗಳನ್ನು ಸಹ ಕೊಂಡಿದ್ದರು. ಆರ್ಡರ್ ಮಾಡಿದ ಮೂರ್ನಾಲ್ಕು ಗಂಟೆಗಳಲ್ಲಿ ಕೇಕ್ ತಯಾರಾಗಿರುತ್ತಿದೆ. ಈ ನಿಟ್ಟಿನಲ್ಲಿ ಹಲವು ಅನುಭವಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂಓದಿ:ಹಾವೇರಿ: ಮಿಂಚಿನಂತೆ ಓಡಿ ನೋಡುಗರನ್ನು ರೋಮಾಂಚನಗೊಳಿಸಿದ ಎತ್ತುಗಳು

Last Updated : Dec 22, 2022, 3:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.