ETV Bharat / state

ಕೆಲಸ ಕೊಡಿ.. ಇಲ್ಲ ಭೂಮಿ ವಾಪಸು ಮಾಡಿ; ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ - Mysore farmers protest

ಮೈಸೂರು ಜಿಲ್ಲೆಯ ನಂಜನಗೂಡಿನ ಹಿಮ್ಮವು ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೈಂಟ್ಸ್ ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ನೀಡಿದ್ದ ರೈತ ಕುಟುಂಬದವರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಬೇಕು, ಇಲ್ಲವೇ ನಮ್ಮ ಭೂಮಿಯನ್ನು ನಮಗೆ ವಾಪಸ್ಸು ನೀಡಬೇಕು ಎಂದು ಕಳೆದ 50 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ.

Farmers protested by tying cows to factory gates in Mysore
ಕಾರ್ಖಾನೆ ಗೇಟಿಗೆ ಹಸುಗಳನ್ನು ಕಟ್ಟಿ ನ್ಯಾಯ ಕೋರಿ ಪ್ರತಿಭಟಿಸಿದ ರೈತರು
author img

By

Published : Jan 11, 2021, 6:00 PM IST

ಮೈಸೂರು: ಭೂಮಿ ಕಳೆದುಕೊಂಡ ರೈತ ಕುಟುಂಬಗಳು ಏಷಿಯನ್ ಪೈಂಟ್ಸ್ ಕಾರ್ಖಾನೆಯ ಗೇಟ್​ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಖಾನೆ ಗೇಟಿಗೆ ಹಸುಗಳನ್ನು ಕಟ್ಟಿ ನ್ಯಾಯ ಕೋರಿ ಪ್ರತಿಭಟಿಸಿದ ರೈತರು

ಏಷಿಯನ್ ಪೈಂಟ್ಸ್ ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ನೀಡಿದ್ದ ರೈತ ಕುಟುಂಬದವರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಬೇಕು, ಇಲ್ಲವೇ ನಮ್ಮ ಭೂಮಿಯನ್ನು ನಮಗೆ ವಾಪಸ್ಸು ನೀಡಬೇಕು ಎಂದು ಕಳೆದ 50 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತ ಕುಟುಂಬಗಳು ನಂಜನಗೂಡಿನ ಹಿಮ್ಮವು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಕಾರ್ಖಾನೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ರೈತರು ಕಾರ್ಖಾನೆಯ ಎಲ್ಲಾ ಗೇಟುಗಳನ್ನು ಬಂದ್ ಮಾಡಿ, ಗೇಟಿನ ಮುಂಬಾಗದಲ್ಲಿ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು. ಈ ವೇಳೆ ತಮಗೆ ನ್ಯಾಯ ದೊರಕಿಸಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿ ಕೂಡಲೇ ನ್ಯಾಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.